oppo_2

ಬಂಟ್ವಾಳ : ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನ  ಪುಣಚ ಗ್ರಾಮದ ಪ.ಪಂ.ಸಮೂದಾಯದ ಮೂವರು ಕುಟುಂಬಗಳು ಹಕ್ಕುಪತ್ರ ಕ್ಕಾಗಿ ನಡೆಸುತ್ತಿರುವ ಧರಣಿ  ಮುಂದುವರಿದಿದ್ದು,ಇದುವರೆಗೆ ಗೇಟ್ ನ ಒಳಭಾಗದಲ್ಲಿ ಆಡಡಳಿತ ಸೌಧದ ಮೆಟ್ಟಲಲ್ಲಿ ಧರಣಿ ಕುಳಿತಿದ್ದ ಫಲಾನುಭವಿ ಕುಟುಂಬ ಶುಕ್ರವಾರ ಆಡಳಿತ ಸೌಧದ ಗೇಟ್ ನ  ಹೊರಭಾಗಕ್ಕೆ ಧರಣಿ ಕುಳಿತಿದ್ದಾರೆ.

oppo_2
ಗೇಟ್ ನ ಒಳಗಡೆ ಪ್ರತಿಭಟನೆ,ಬ್ಯಾನರ್,ಧ್ವಜ ಅಳವಡಿಸಲು  ಇತ್ತೀಚೆಗೆ ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಮೂರು ಕುಟುಂಬವು ಹಕ್ಕುಪತ್ರಕ್ಕಾಗಿ ಗೇಟ್ ನಹೊರಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ ಭಾವಚಿತ್ರವನ್ನಿರಿಸಿ ನೀಲಿ ಬಣ್ಣದ ಧತವ ಅಳವಡಿಸಿ ಧರಣಿ ಕುಳಿತಿದ್ದಾರೆ.
ಗುರುವಾರದಂದು ಸರಕಾರಿ ರಜೆ ಇದ್ದ ಕಾರಣದಿಂದ  ಮೂರು ಕುಟುಂಬಗಳು‌ಕೂಡ ಧರಣಿಯನ್ನು ನಡೆಸಿರಲಿಲ್ಲ,ಶುಕ್ರವಾರ ಮತ್ತೆ ಧರಣಿಯನ್ನು ಮುಂದುವರಿಸಿದ್ದಾರೆ.ಈ ಮೂರು ಕುಟುಂಬದ ಮನೆ ಯಜಮಾನಿ ಸಹಿತ ಎಲ್ಲಾ ಸದಸ್ಯರು ಕೂಡ ಗಿರಿಧರ ನಾಯ್ಕ್ ಅವರ ನೇತೃತ್ವದಲ್ಲಿ ಧರಣಿಕುಳಿತಿದ್ದಾರೆ.
ಕಳೆದ ವಾರ ನಾಲ್ಕುದಿನಗಳ ಕಾಲ ನಡೆಸಿದ ಧರಣಿತ ವೇಳೆ ಪುತ್ತೂರು ಮತ್ತು ಬಂಟ್ವಾಳ ಮಂಡಲದ ಬಿಜೆಪಿ ನಾಯಕರು,ಕಾರ್ಯಕರ್ತರು ಕೂಡ ಸಾಥ್ ನೀಡಿದ್ದರು.ಆದರೆ ಕಳೆದೆರಡು ದಿನಗಳ ಧರಣಿಯ ವೇಳೆ ಈ ನಾಯಕರು ಯಾರು ಧರಣಿಯಲ್ಲಿ ಪಾಲ್ಗೊಂಡಿಲ್ಲ,ಪ.ಪಂ.ದ ಮೂರು ಕುಟುಂಬ ಕಳೆದ ಒಂದುವಾರದಿಂದ ಬಿ.ಸಿ.ರೋಡಿನ ತಾಲೂಕು ಆಡಳಿತಸೌಧದ ಮುಂಭಾಗ ಧರಣಿ ಕುಳಿತರೂ ರಾಜಕೀಯ ಒಣಪ್ರತಿಷ್ಠೆಗಾಗಿ ಇನ್ನು ಕೂಡ ಈ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಮುಂದಾಗದಿರುವುದು ವಿಪರ್ಯಾಸವಾಗಿದೆ ಎಂಬ ಟೀಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ

By suddi9

Leave a Reply

Your email address will not be published. Required fields are marked *