ಗುರುಪುರ : ಈದ್ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಮೇ. ೨೮ರಂದು ಕರ್ನಾಟಕ ಮುಸ್ಲಿಂ ಜಮಾತ್ ಮತ್ತು ಎಸ್‌ವೈಎಸ್, ಎಸ್ಸೆಸ್ಸೆಫ್ ವಾಮಂಜೂರು ಘಟಕದ ವತಿಯಿಂದ ವಾಮಂಜೂರು ಮೂಡುಶೆಡ್ಡೆಯ ಕ್ಷಯ ರೋಗ ಚಿಕಿತ್ಸೆಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.


ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಯೋಗಕ್ಷೇಮ ವಿಚಾರಿಸಿದ ಮುಸ್ಲಿಂ ಮುಖಂಡರು, ೩೩ಕ್ಕೂ ಅಧಿಕ ರೋಗಿಗಳಿಗೆ ಹಣ್ಣುಹಂಪಲು ನೀಡಿ, ಸಂತೈಸಿದರು.

ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಎಸ್‌ವೈಎಸ್ ದ.ಕ ಪಶ್ಚಿಮ ಜಿಲ್ಲಾ ಉಪಾಧ್ಯಕ್ಷ ಬದ್ರುದ್ದೀನ್ ಅಝ್ ಹರಿ ಅಲ್ ಕಾಮಿಲ್, ಮೂಡಬಿದ್ರೆ ವಲಯ ಅಧ್ಯಕ್ಷ ಬಶೀರ್ ಕೈಕಂಬ, ಇಸಾಬ ಕಾರ್ಯದರ್ಶಿ ಝೈನುದ್ದೀನ್ ಅಡ್ಡೂರು, ಎಸ್‌ವೈಎಸ್ ವಾಮಂಜೂರು ಘಟಕಾಧ್ಯಕ್ಷ ಶರೀಫ್ ವಾಮಂಜೂರು, ಪ್ರಧಾನ ಕಾರ್ಯದರ್ಶಿ ರಿಯಾಝ್ ವಾಮಂಜೂರು, ಕೋಶಾಧಿಕಾರಿ ಹೈದರ್ ವಾಮಂಜೂರು, ಎಸೆಸ್ಸೆಫ್ ಮುಖಂಡ ಸೈಫುಲ್ಲ ಜೌಹರಿ, ಮುಸ್ತಫ ಮುರ್ಝಾಖಿ, ಕಾರ್ಯದರ್ಶಿಗಳಾದ ಶರೀಫ್, ಮುಸ್ತಫ ಜ್ಯೋತಿನಗರ, ಇಲ್ಯಾಸ್ ಜ್ಯೋತಿನಗರ, ಜಮಾಲ್ ಜ್ಯೋತಿನಗರ, ಸಿದ್ಧಿಕ್ ವಾಮಂಜೂರು, ಯಂಗ್‌ಮೆನ್ಸ್ ಪ್ರಧಾನ ಕಾರ್ಯದರ್ಶಿ ಶಾನವಾಝ್, ಅಬೂಬಕರ್, ಮಹಮ್ಮದ್ ರಫೀಕ್, ರಿಳ್ವಾನ್ ಮರ್ಕಝ್‌ನಗರ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *