ಬಂಟ್ವಾಳ:  ಆಹಾರ, ನಾಗರಿಕ ಸರಬುರಾಜು ಇಲಾಖಾ ವತಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುತ್ತಿರುವ ಪಡಿತರ  ಅಕ್ಕಿಯು ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಸರಿಯಾಗಿ ತಲುಪಿಸಲಾಗದೆ ತುಂಬಾ ಅಡಚಣೆಯಾಗುತ್ತಿದ್ದು,ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಅಕ್ಕಿ ವಿತರಣೆಯಲ್ಲಿ ಅಗುತ್ತಿರುವ ವ್ಯತ್ಯಯನ್ನು  ನಿವಾರಣೆಗೆ ಕ್ರಮ ಕೈಗೊಳ್ಳುವಂತೆ  ಸಿದ್ದಕಟ್ಟೆ ಪ್ರಾ.ಕೃ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಕರ್ಪೆ ಅವರು ಕರ್ನಾಟಕ ಸರಕಾರದ ಆಹಾರ, ನಾಗರಿಕ ಸರಬುರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರಿಗೆ ಲಿಖಿತ ಮನವಿ ಮೂಲಕ ಆಗ್ರಹಿಸಿದ್ದಾರೆ

ಸರ್ವರ್  ಸಮಸ್ಯೆಯಿಂದಾಗಿ  ಗ್ರಾಹಕರು ತಮ್ಮ ಪಡಿತರ ಅಕ್ಕಿ ಪಡೆಯಲು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಾ ಪೂರ್ತಿಯಾಗಿ ಕಾಯುವ ಪರಿಸ್ಥಿತಿ .
ನಿರ್ಮಾಣಗೊಂಡಿದೆ.ಗ್ರಾಮೀಣ ಭಾಗದ ಕೆಲ ನ್ಯಾಯಬೆಲೆ ಅಂಗಡಿಯಲ್ಲಿ  ದಿನಾ ಪೂರ್ತಿ ಕಾದು ನಿಂತರೂ ಸರ್ವರ್ ಸಮಸ್ಯೆಯಿಂದ ಅಕ್ಕಿ ಲಭಿಸದೆ ಬರಿಗೈಯಲ್ಲಿ ವಾಪಾಸ್ ಹೋಗುವಂತಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಸರಕಾರದ ಮಟ್ಟದಲ್ಲಿನ ಈ ರೀತಿಯ ತಾಂತ್ರಿಕ ಅಡಚಣೆಯಿಂದಾಗಿ ಕೂಲಿ ಕೆಲಸ ಮಾಡುತ್ತಿರುವ ಬಿಪಿಎಲ್ ಪಡಿತರ ಚೀಟಿದಾರ ಗ್ರಾಹಕರು ಸಕಾಲದಲ್ಲಿ ಅಕ್ಕಿ ಸಿಗದೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಳ್ಳುತ್ತಿದ್ದಾರೆ.
ಸಂಬಂಧ ಪಟ್ಟ ಆಹಾರ ಅಧಿಕಾರಿಗಳಲ್ಲಿ ವಿಚಾರಿಸಿದರೆ ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳಿನಲ್ಲಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಉದ್ಭವಿಸಿದೆ ಎಂದು ಸಬೂಬು  ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಸಮರ್ಪಕ ಕಾರಣ ತಿಳಿಯದಿದ್ದ, ಸರ್ವರ್ ಸಮಸ್ಯೆ ತಿಂಗಳ ಅಂತ್ಯದವರೆಗೂ ಹೀಗೆಯೇ ಮುಂದುವರಿದರೆ ಕೆಲವರು ಪಡಿತರ ಅಕ್ಕಿ ಪಡೆಯುವಲ್ಲಿ ವಂಚಿತರಾಗಬಹುದು ಎಂದು ಪ್ರಭು ಅವರು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮೇ.ತಿಂಗಳ ಅಕ್ಕಿಯನ್ನು  ರಾಜ್ಯ ಸರಕಾರ ಅಕ್ಕಿ ವಿತರಿಸಿಲ್ಲ.
ಕೇಂದ್ರ ಸರಕಾರವು ಮುಂಗಡವಾಗಿ ಎರಡು ತಿಂಗಳಿಗೆ ಬಿಡುಗಡೆ ಮಾಡಿದ ಅಕ್ಕಿಯಂನ್ನು ಹೊಂದಾಣಿಕೆ ಮಾಡಿಕೊಂಡು
ಎರಡೆರಡು ಬಾರಿ ಗ್ರಾಹಕರಿಂದ  ಬೆರಳ ಅಚ್ಚು ( ತಂಬ್) ತೆಗೆದುಕೊಳ್ಳುವುದರಿಂದ  ಸರ್ವರ್ ಸಮಸ್ಯೆಗೆ ಇನ್ನೊಂದು ಕಾರಣ ಎಂದು ಹೇಳಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರ ಅಕ್ಕಿಯನ್ನು ಜೂನ್ ಮೊದಲ ವಾರದವರೆಗೂ ನೀಡಲು ಸೂಕ್ತ ಆದೇಶ ನೀಡಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

By Suddi9

Leave a Reply

Your email address will not be published. Required fields are marked *