ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ನೆಟ್ಲಮುಡ್ನೂರು ಗ್ರಾಮದ ಬಿಲ್ಲವ ಗ್ರಾಮ ಸಮಿತಿಯ ಕಾರ್ಯಕಾರಿ ಸಭೆಯು ಸೋಮಪ್ಪ ಪೂಜಾರಿ ಮಾದೇಲು ಇವರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀಧರ್ ಪೂಜಾರಿ ಮುಜಲ ವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 615 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 10ನೇ ರ‍್ಯಾಂಕ್ ಗಳಿಸಿದ
ರಮೇಶ್ ಪೂಜಾರಿ ಮೆಸ್ಕಾಂ ಹಾಗೂ ಡಾ. ತ್ರಿವೇಣಿ ರಮೇಶ್ ದಂಪತಿಗಳ ಪುತ್ರಿ ಪ್ರಗತಿ ಆರ್ ಸಾಲ್ಯಾನ್ ಹಾಗೂ ಒಡಿಸ್ಸಿ ನೃತ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ನಡು ಉರ್ದಿಲ ಜನಾರ್ದನ ಪೂಜಾರಿ ಮತ್ತು ಅಶ್ವಿತಾ ದಂಪತಿಗಳ ಪುತ್ರಿ ಆರಾಧ್ಯ ಪೂಜಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಘದ ಪದಾಧಿಕಾರಿಗಳು ಹಾಗೂ ಬಿಲ್ಲವ ಸಮಾಜದ ಬಾಂಧವರು ಉಪಸ್ಥಿತರಿದ್ದರು.
