ಬಂಟ್ಚಾಳ : ಗಾಳದಕೊಂಕಣಿ ಅಭ್ಯುದಯ ಸಂಘದ 72 ನೇ ವಾರ್ಷಿಕ ಮಹಾಸಭೆ,ಉಚಿತ ಪುಸ್ತಕ ವಿತರಣೆ,ಪ್ರತಿಭಾ ಪುರಸ್ಕಾರ,ಸನ್ಮಾನ ಕಾರ್ಯಕ್ರಮವು ತೊಕ್ಕೊಟ್ಟು ಕಾಪಿಕಾಡಿನಲ್ಲಿರುವ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

 ಸೋಮನಾಥ ಉಳಿಯ ಕ್ಷೇತ್ರದ ಗಡಿಪ್ರದಾನರಾದ ಬಸಪ್ಪ ಯಾನೆ ಜೆ.ರವೀಂದ್ರ ನಾಯಕ್ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘವು ಶಿಕ್ಷಣಕ್ಕೆ ವಿಶೇಷ ಒತ್ತು ನೀಡುವುದರ ಜೊತೆಗೆ ಪ್ರಸಕ್ತ ದಿನಗಳಲ್ಲಿ ಸಂಘಟನಾತ್ಮಕ ವಾಗಿಯು ಬೆಳೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನಮ್ಮ ಪೂರ್ವಜರು ಹಾಕಿಕೊಟ್ಟಿರುವ ಸಂಸ್ಕಾರವನ್ನು ಮುಂದಿನ ಪೀಳಿಗೆಯು
ಮೈಗೂಡಿಸಿಕೊಂಡು ಮುನ್ನಡೆಯಬೇಕು, ನಾವು ಆರಾಧಿಸುವ ಕುಲದೇವಿಯ ವಿಚಾರದಲ್ಲಿ ಸಮುದಾಯದ ಬಂಧುಗಳು ಯಾವುದೇ ಗೊಂದಲಕ್ಕೊಳಗಾಗದಿರಿ ಎಂದು ಹೇಳಿದರು.
ಅತಿಥಿಗಳಾಗಿದ್ದ ಸೋಮನಾಥ ಉಳಿಯ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಉಮಾನಾಥ ನಾಯಕ್ ಉಳ್ಳಾಲ್,ಗೌರವಾಧ್ಯಕ್ಷರಾದ ಯು.ದಯಾನಂದ ನಾಯಕ್,ಮುಂಬೈ ಸಜ್ಜನ್ ಸೇವಾ ಸಂಘದ ಮಾಜಿ ಅಧ್ಯಕ್ಷ ದೇವದಾಸ್ ನಾಯಕ್ ಮಾತನಾಡಿದರು.
ಸಂಘದ ಉಪಾಧ್ಯಕ್ಷರಾದ ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ,ಹೇಮಾ ಕೇಶವ ನಾಯಕ್ ವೇದಿಕೆಯಲ್ಲಿದ್ದರು.
ಇದೇ ವೇಳೆ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ‌ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನದೊಂದಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಅದೇರೀತಿ ಸಂಘದ ಚಟುವಟಿಕೆಯಿಂದ ನಿವೃತ್ತರಾದ ಇಬ್ಬರು ಹಿರಿಯರನ್ನು  ಸನ್ಮಾನಿಸಲಾಯಿತು.ಒಂದರಿಂದ ಹತ್ತನೇ ತರಗತಿಯವರೆಗಿನ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಸಮುದಾಯದ ಅಶಕ್ತರು,ವಿಕಲಚೇತನರಿಗೆ ಸಹಾಯಧನವನ್ನು ವಿತರಿಸಲಾಯಿತು.
ಸಂಘದ ಸದಸ್ಯೆ ನಳಿನಿ ಎಸ್.ನಾಯಕ್ ಪ್ರಾರ್ಥಿಸಿದರು.ಕಾರ್ಯದರ್ಶಿ ಆಶಾ ನಾಯಕ್ ಗೋರಿಗುಡ್ಡೆ ಸ್ವಾಗತಿಸಿದರು.
ಕೋಶಾಧಿಕಾರಿ ಡಾ.ಧನಲಕ್ಷ್ಮೀ ಎಂ.ಮಣ್ಣಗುಡ್ಡೆ ವಾರ್ಷಿಕ ವರದಿ ವಾಚಿಸಿದರು. ಪ್ರಧಾನಕಾರ್ಯದರ್ಶಿ ಮುರಳೀಧರ ನಾಯಕ್ ಬಬ್ಬುಕಟ್ಟೆ ಲೆಕ್ಕಪತ್ರ ಮಂಡಿಸಿದರು.ಮಾಜಿ ಪ್ರ.ಕಾರ್ಯದರ್ಶಿ ಕೋಡಿ ಜಯನಾಯಕ್ ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ನಿರೂಪಿಸಿ, ಕೊನೆಯಲ್ಲಿ  ವಂದಿಸಿದರು.

By Suddi9

Leave a Reply

Your email address will not be published. Required fields are marked *