ಬಂಟ್ಚಾಳ: ಇಲ್ಲಿನ ದಡ್ಡಲಕಾಡು ಪಿ. ಎಂ ಶ್ರೀ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ  ಶನಿವಾರ ಮಕ್ಕಳ ದಾಖಲಾತಿ ಆಂದೋಲನವನ್ನು ಜಾಥಾದ ಮೂಲಕ ನಡೆಸಲಾಯಿತು·
ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಯಿತು·

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ  ಪ್ರಕಾಶ್ ಅಂಚನ್ , ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ  ಶೈಲೇಂದ್ರ ಕುಮಾರ್ , ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಜಯಶ್ರೀ , ಸಂಸ್ಥೆಯ ಹಿರಿಯ  ಶಿಕ್ಷಕಿ ಹಿಲ್ಡಾ ಫೆರ್ನಾಂಡಿಸ್ , ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷರಾದ  ಬಾಲಕೃಷ್ಣ ಗೌಡ, ಎಸ್ ಡಿ ಎಂ ಸಿ ಸದಸ್ಯರ, ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *