ಬಂಟ್ವಾಳ :ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಅರಿವು ಕೇಂದ್ರ ಹಾಗೂ ಮಾಹಿತಿ ಕೇಂದ್ರ, ಇರ್ವತ್ತೂರು ಡಿಜಿಟಲ್ ಗ್ರಂಥಾಲಯ ಇದರ ಆಶ್ರಯದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ  ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ ಇರ್ವತ್ತೂರು ಗ್ರಾ.ಪಂ.ಗ್ರಂಥಾಲಯದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ನಾರಾಯಣ ಭಟ್ ಅವರು ಶಿಬಿರವನ್ನು ಉದ್ಘಾಟಿಸಿಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಸರಕಾರ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಿಬಿರದಲ್ಲಿಪುಸ್ತಕ ಓದುವಿಕೆ ಮಾತ್ರವಲ್ಲದೆ  ಚಟುವಟಿಕೆ ಆಧಾರಿಕತ ಕಲೆ, ವಿಜ್ಞಾನ ಆಧಾರಿತ ಕಲೆಗಳನ್ನು ತಿಳಿಸಲಾಗುವುದು. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
   ಗ್ರಾಮ ಪಂಚಾಯತ್ ಅಭಿವೃದ್ಧಿ ಅಽಕಾರಿ ನಿಶಾಂತ್ ಬಿ.ಆರ್., ಪಂಚಾಯತ್ ಮಾಜಿ  ಉಪಾಧ್ಯಕ್ಷರಾದ ಶಂಕರ್ ಶೆಟ್ಟಿ ಬೆದ್ರಮಾರ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ  ಸದಸ್ಯರಾದ ಸುಽಂದ್ರ ಶೆಟ್ಟಿ ಎರ್ಮೆನಾಡು,  ಚಿತ್ರಕಲಾ ಶಿಕ್ಷಕ ವಿಘ್ನೇಶ್,  ಗ್ರಂಥಪಾಲಕಿ ಕವಿತಾ ಲೋಕೇಶ್, ವೆಂಕಟೇಶ್. ಸಂಜೀವಿನಿ ಎಂ ಬಿ ಕೆ ಶಾರದಾ, ಪಂಚಾಯತ್ ಸಿಬಂದಿ ವರ್ಗ, ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *