ಬಂಟ್ವಾಳ:ಯಕ್ಷಾಭಿಮಾನಿಗಳು ಪುಂಜಾಲಕಟ್ಟೆ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಸಾಧಕ ವಿದ್ಯಾರ್ಥಿಗಳಾದ ಅನನ್ಯಾ ಶೆಟ್ಟಿ ಬೆರ್ಕಳ, ಸಾನ್ವಿ ಪೂಜಾರಿ ಕುಕ್ಕಳ, ಅನನ್ಯಾ ಗೌಡ ಕಾವಳಕಟ್ಟೆ, ವೈಶಾಲಿ ಪೂಜಾರಿ ನಾಕುನಾಡು, ಜೀವಿತ್ ದಾಸ್ ಪುರಿಯ, ವೈಷ್ಣವಿ ಪುಳಿಮಜಲು, ಸಾತ್ವಿಕ್ ಶೆಟ್ಟಿ ಗ್ರಾಮದ ಬೆಟ್ಟು ಅವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯಡ್ಕ ಮೇಳದ ಹಿರಿಯ ಯಕ್ಷಗಾನ ಕಲಾವಿದರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮಡಂತ್ಯಾರು ಜೇಸೀಸ್ ಕ್ಲಬ್ ಅಧ್ಯಕ್ಷೆ ಸಾಯಿಸುಮಾ ನಾವಡ ಕಾರಿಂಜ, ಹಿರಿಯಡ್ಕ ಮೇಳದ ಯಜಮಾನರಾದ ಕಿಶೋರ್ ಸಾಲ್ಯಾನ್ ತೋಡಾರ್, ಯಕ್ಷಾಭಿಮಾನಿಗಳು ಬಳಗದ ಸಂಚಾಲಕಿ ಬೇಬಿ ರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಕಿಶೋರ್ ಬೆರ್ಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಬಳಿಕ ಹಿರಿಯಡ್ಕ ಮೇಳದವರಿಂದ ಅಪ್ಪೆ ಮಾಯಂದಾಲ್ ಯಕ್ಷಗಾನ ಪ್ರದರ್ಶನ ನಡೆಯಿತು.
 
 
 
 
 

By Suddi9

Leave a Reply

Your email address will not be published. Required fields are marked *