ಬಂಟ್ವಾಳ : ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಬಂಟ್ವಾಳತಾಲೂಕಿನ ಹೋಬಳಿ ಮಟ್ಟದ ದಾಖಲಾತಿ ಆಂದೋಲನ ಕಾರ್ಯಕ್ರಮವು ತಾಲೂಕಿನ 5 ವಲಯದಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಯಿತು.
ಆಯಾಯ ಹೋಬಳಿ ಮಟ್ಟದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಅಂದೋಲನಕ್ಕೆ ಚಾಲನೆ ನೀಡಿದರು

ಎಸ್ ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು ಈ ಸಂದರ್ಭ ಹಾಜರಿದ್ದರುವಾಮದಪದವು ವಲಯ ಮಟ್ಟದಲ್ಲಿ ಚೆನ್ನೈತ್ರೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಂಟೆಪದವು ಕೆಪಿಎಸ್ ಪ್ರಾಥಮಿಕ ಶಾಲೆ,ಬಂಟ್ವಾಳ ನಗರ ವಲಯದ ತುಂಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಕಲ್ಲಡ್ಕ ವಲಯದ ದಾಖಲಾತಿಅಂದೋಲನ ಮಾಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ,ವಿಟ್ಲವಲಯದ ದಾಖಲಾತಿ ಆಂದೋಲನ ವಿಟ್ಲ ಆರ್ ಎಂ ಎಸ್ ಎ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು
