ಹೆಬ್ರಿ: ಕಸ್ತೂರಿ ರಂಗನ್ ವರದಿಯ ಅನುಷ್ಠಾನ ವಿರೋಧಿಸಿ, `ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಹೆಬ್ರಿ ವಲಯ’ ಇಂದು ಹೆಬ್ರಿ ಬಂದ್‍ಗೆ ಕರೆ ನೀಡಿದೆ. ಅದರಂತೆ ಇಂದು ಯಾವುದೇ ವಾಹನಗಳು ರೋಡಿಗಿಳಿಯದೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ.
ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರ ತನಕ ಈ ಬಂದ್ ನಡೆಯಲಿದೆ. ತುರ್ತು ಆರೋಗ್ಯ ಸೇವೆ ಹೊರತುಪಡಿಸಿ ಈ ದಿನ ಶಾಲಾ-ಕಾಲೇಜ್‍ಗಳು, ಹೋಟೆಲ್, ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ  ಮುಚ್ಚಿವೆ.

hebri bundh
ಹೆಬ್ರಿ, ಚಾರ, ಬೇಳೆಂಜೆ, ಕುಚ್ಚೂರು, ನಡ್ಪಾಲು, ಕಬ್ಬಿನಾಲೆ ಈ ಗ್ರಾಮಗಳ ಬಹುತೇಕ ಜನರು ಕೃಷಿ ಹಾಗೂ ತೋಟಗಾರಿಕೆಯನ್ನೇ ತಲೆತರಾಂತರಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಕಸ್ತೂರಿ ರಂಗನ್ ವರದಿಯ ಅನುಷ್ಠಾನ ದಿಂದ ಕೃಷಿ ಮತ್ತು ತೋಟಗಾರಿಕೆ ಮುಂದುವರಿಸಲು ಜನರಿಗೆ ತೊಂದರೆ ಆಗಲಿದೆ. ಈ ಭಾಗದಲ್ಲಿರುವ ಅನೇಕ ಕಾರ್ಖಾನೆಗಳು ಮುಚ್ಚಲಿದ್ದು, ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಉಂಟಾಗಲಿದೆ. ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಆದರೆ ಜನವಸತಿಪ್ರದೇಶ ಇರುವ ಪ್ರದೇಶದಲ್ಲಿ ಇದನ್ನು ಕೈಬಿಟ್ಟು, ಜನರ ಅಭಿಪ್ರಾಯ ಸಂಗ್ರಹಿಸಿ ಆಮೇಲೆ ಅನುಷ್ಠಾನದ ಬಗ್ಗೆ ನಿರ್ಧರಿಸಬೇಕು ಎಂದು ಸಮಿತಿ ತಿಳಿಸಿದೆ. 

ಹೆಬ್ರಿಯ ಮುಖ್ಯ ರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಜಾಥಾ ಮಹ್ಹಿಕೊಳ್ಳಲಾಗಿದೆ.

 

By suddi9

Leave a Reply

Your email address will not be published. Required fields are marked *