ಬಂಟ್ವಾಳ: ಶ್ರೀ ರಾಮ ನವಮಿಯ ಶುಭ ಸಂದರ್ಭದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನೂತನ ಸ್ಟುಡಿಯೋ “ರಾಮಧ್ವನಿ” ಲೋಕಾರ್ಪಣೆಗೊಳಿಸಲಾಯಿತು. ಮಣಿಪಾಲ ಫೌಂಡೇಶನ್ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರಿನಾರಾಯಣ ಶರ್ಮಾ ಅವರು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಸ್ಟುಡಿಯೋದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಬೇಕಲ ಗೋಕುಲಂ ಗೋಶಾಲಾ, ಪರಂಪರಾ ವಿದ್ಯಾಪೀಠಂ ಅಲಕೋಡೆ ಕೇರಳಂ ಇದರ ಸ್ಥಾಪಕರಾದ ಜ್ಯೋತಿಷಿ ವಿಷ್ಣುಪ್ರಸಾದ್ ಹೆಬ್ಬಾರ್,
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಉಪಸ್ಥಿತರಿದ್ದರು.

ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಹಿರಿಯರಾದ ಡಾ. ಕಮಲಾ ಪ್ರಭಾಕರ ಭಟ್, ಕಾಲೇಜಿನ ಪ್ರಾಚಾರ್ಯ ಕೃಷ್ಣ ಪ್ರಸಾದ್ ಕಾಯರಕಟ್ಟೆ, ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮೀ ರಘುರಾಜ್, ಅಜಿತ್ ಮುಲಾರ್, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ್ ಬಲ್ಲಾಳ್, ರಾಮಧ್ವನಿ ಸ್ಟುಡಿಯೋದ ನಿರ್ವಾಹಕ ನವೀಶ್ ಆಚಾರ್ಯ, ಪದವಿ ವಿಭಾಗದ ಉಪನ್ಯಾಸಕ- ಉಪನ್ಯಾಸಕೇತರರು ಉಪಸ್ಥಿತರಿದ್ದರು.
