ಸುದ್ದಿ9ಕೈಕಂಬ ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಆರಂಭವಾದ ಮಂಗಳೂರು ವಿವಿ ಕ್ರೀಡಾಕೂಟದಲ್ಲಿ ಮೊದಲ ದಿನ ಆಳ್ವಾಸ್ನ ಕ್ರೀಡಾಪಟುಗಳು ಆರು ಹೊಸ ಕೂಟ ದಾಖಲೆಗಳನ್ನು ಬರೆದಿದ್ದಾರೆ.
ನೂತನವಾಗಿ ನಿರ್ಮಿಸಿದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆದ ಮೊದಲ ಗೇಮ್ನಲ್ಲಿ ಪುರುಷರ ವಿಭಾಗದ 800ಮೀ ಓಟದಲ್ಲಿ 2 ಹೊಸ ಕೂಟ ದಾಖಲೆಗಳು ದಾಖಲಾದವು. ಆತಿಥೇಯ ಆಳ್ವಾಸ್ ಕಾಲೇಜಿನ ಭರತ್ ಅವರು 1 ನಿಮಿಷ 50.8 ಸೆಂಕೆಡ್ಸ್ಗಳಲ್ಲಿ ಕ್ರಮಿಸಿ ಅದೇ ಕಾಲೇಜಿನ ಸೂರಜ್ ಅವರ 2013-14ನೇ ಸಾಲಿನ ಹಳೆಯ ದಾಖಲೆ 1.53.00ನ್ನು ಅಳಿಸಿ ಹೊಸ ದಾಖಲೆ ನಿರ್ಮಿಸಿದರು. ಈ ಕೂಟದಲ್ಲಿ ಸೂರಜ್ ಅವರು 1 ನಿಮಿಷ 51.2 ಸೆಂಕೆಂಡ್ಗಳಲ್ಲಿ ಕ್ರಮಿಸಿ ತಮ್ಮ ಹಿಂದಿನ ಸಾಧನೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡರಲ್ಲದೆ ಮತ್ತೊಂದು ಕೂಟ ದಾಖಲೆಯನ್ನು ನಿರ್ಮಿಸಿದರು. ಹೈಜಂಪ್ನಲ್ಲಿ ಅಳ್ವಾಸ್ ಕಾಲೇಜಿನ ಶ್ರೀನಿತ್ ಮೋಹನ್ 2.16 ಮೀ ಎತ್ತರಕ್ಕೆ ಜಿಗಿದು ಎಸ್ಡಿಎಂಸಿ ಕಾಲೇಜಿನ ಸುಪ್ರೀತ್ ಅವರ 2010-11ರ ಸಾಲಿನ 2.06 ಮೀಟರನ್ನು ಅಳಿಸಿದರು. 400ಮೀ ಹಾರ್ಡಲ್ಸ್ನಲ್ಲಿ ಆಳ್ವಾಸ್ ಕಾಲೇಜಿನ ಬಿನು ಜೋಸ್ 53.04 ಸೆಂಕೆಂಡ್ಸ್ಗಳಲ್ಲಿ ಕ್ರಮಿಸಿ ಆಳ್ವಾಸ್ ಕಾಲೇಜಿನ 2013-14ನೇ ಸಾಲಿನ ಚರಣ್ ಕೆ.ಬಿ ಅವರ 54.01 ಸೆಕೆಂಡ್ಸ್ನ್ನು ಅಳಿಸಿ ಹೊಸ ದಾಖಲೆ ನಿಮಿಸಿದರು. ಹುಡುಗಿಯರ ವಿಭಾಗದ 100ಮೀ ಓಟದಲ್ಲಿ ಆಳ್ವಾಸ್ ಕಾಲೇಜಿನ ಪ್ರಿಯಾಂಕ ಎಸ್ ಕಲಗಿ 11.8 ನಿಮಿಷಗಳಲ್ಲಿ ಗುರಿ ತಲುಪಿ ಆಳ್ವಾಸ್ ಕಾಲೇಜಿನ ಭೂವಿ ಎಸ್ ಶಂಕರ್ ಅವರ 2013-14ರ ಸಾಲಿನ 12.03ನ್ನು ಅಳಿಸಿದರು. 400 ಮೀ ಹರ್ಡಲ್ಸ್ ನಲ್ಲಿ ಆಳ್ವಾಸ್ನ ಸಿಮೋನ ಮಸ್ಕರೇನಸ್ 1.03.3 ನಿಮಿಷಗಳಲ್ಲಿ ಕ್ರಮಿಸಿ ಉಜಿರೆ ಎಸ್ಡಿಎಂಸಿಯ ವಿಜಯಲಕ್ಷ್ಮೀ ಅವರ 2003-04 ಹಳೆಯ ದಾಖಲೆ 1.03.09 ನ್ನು ಅಳಿಸಿದರು. ಶಾಟ್ಫುಟ್ನಲ್ಲಿ ಆಳ್ವಾಸ್ ಕಾಲೇಜಿನ ನಮಿತಾ ಜಿ.ಕೆ 12.99 ದೂರಕ್ಕೆ ಎಸೆದು ಸೈಂಟ್ ಆಗ್ಲೇಸ್ ಕಾಲೇಜಿನ ರೀನಾ ರೋಡ್ರಿಗಸ್ ಅವರ 2002-03ರ ಹಳೆಯ ದಾಖಲೆ 12.78ನ್ನು ಅಳಿಸಿ ಹೊಸ ದಾಖಲೆ ನಿರ್ಮಿಸಿದರು.

ಫಲಿತಾಂಶ
ಪುರುಷರ ವಿಭಾಗ : 800 ಮೀ. ಭರತ್ ಆಳ್ವಾಸ್ ಕಾಲೇಜು (ಪ್ರ), ಸೂರಜ್ ಆಳ್ವಾಸ್ ಕಾಲೇಜು (ದ್ವಿ), ಯಶವಂತ್ ಮಂಗಳೂರು ವಿವಿ ಕ್ಯಾಂಪಸ್(ತೃ)
100ಮೀ. ಗೌರೀಶ್ ಆಳ್ವಾಸ್ ಕಾಲೇಜು (ಪ್ರ), ರೀತೆಶ್ ಕುಮಾರ್ ಎಸ್ಡಿಎಂ ಮಂಗಳೂರು, (ದ್ವಿ), ನಾಗಭೂಷಣ್ ಆಳ್ವಾಸ್ (ತೃ)
ಶಾಟ್ಫುಟ್ ಜೈಸನ್ ರುಬಿನ್ ಸಾಲಿನ್ಸ್ ಸೈಂಟ್ ಅಲೋಸಿಯಸ್ಸ್ (ಪ್ರ), ಗೌತಮ್ ಆಳ್ವಾಸ್ (ದ್ವಿ), ಸುನಿಲ್ ಜಿ.ಎಫ್.ಜಿ.ಸಿ ಕುಶಾಲ್ನಗರ (ತೃ)
400 ಮೀ ಹರ್ಡಲ್ಸ್ ಬಿನು ಜೋಸ್ ಆಳ್ವಾಸ್ (ಪ್ರ), ಜಗದೀಶ್ಚಂದ್ರ ಆಳ್ವಾಸ್ (ದ್ವಿ), ಶ್ರೀದತ್ತ ಮೊಗೇರ್ ಎಸ್ಡಿಎಂ ಉಜಿರೆ(ತೃ)
ಹೈಜಂಪ್ ಶ್ರೀನಿತ್ ಮೋಹನ್ ಆಳ್ವಾಸ್ (ಪ್ರ), ಚೇತನ್ ಆಳ್ವಾಸ್ (ದ್ವಿ), ರ್ದುಗೇಶ್ ಎನ್ಎಸ್ಎಎಂ ನಿಟ್ಟೆ (ತೃ)
ಮಹಿಳೆಯರ ವಿಭಾಗ : 800ಮೀ. ಉಮಾ ಭಾಗ್ಯಲಕ್ಷ್ಮೀ ಸೈಂಟ್ ಅಲೋಸಿಯಸ್ ಮಂಗಳೂರು (ಪ್ರ), ಪೂರ್ಣಿಮ ಆಳ್ವಾಸ್ (ದ್ವಿ), ಸುಪ್ರಿತಾ ಆಳ್ವಾಸ್ (ತೃ)
100ಮೀ ಪ್ರಿಯಾಂಕ ಕಲಗಿ ಆಳ್ವಾಸ್ (ಪ್ರ), ಭುವಿ ಬಿ. ಶಂಕರ್ ಆಳ್ವಾಸ್ (ದ್ವಿ), ವರ್ಷ ಸೈಂಟ್ ಅಲೋಸಿಯಸ್ಸ್ ಮಂಗಳೂರು (ತೃ)
ಶಾಟ್ಫುಟ್ ನಮಿತಾ ಆಳ್ವಾಸ್ (ಪ್ರ), ನಿಶಾ ಯು. ಆಳ್ವಾಸ್ (ದ್ವಿ), ಚೈತ್ರ ಡಿ. ಸುವರ್ಣ ಎಸ್ಡಿಎಂ ಮಂಗಳೂರು (ತೃ)
ಹೈಜಂಪ್ ಸುಶ್ಮಿತಾ ಮಹೇಶ್ ಕಾಲೇಜು (ಪ್ರ), ಬಬಿತಾ ಎಸ್ಡಿಎಂ ಉಜಿರೆ (ದ್ವಿ), ಹರ್ಷಿ
ತಾ ಆಳ್ವಾಸ್ (ತೃ)
400 ಮೀ ಹರ್ಡಲ್ಸ್ ಸಿಮೋನಾ ಮಸ್ಕರೇನಸ್ ಆಳ್ವಾಸ್ (ಪ್ರ), ಶ್ಯಾಮಿಲಿ ಬಿ.ಬಿ ಮಂಗಳೂರು ವಿವಿ ಕ್ಯಾಂಪಸ್ (ದ್ವಿ), ಪೂಜಾಶೆಟ್ಟಿ (ತೃ)
ಚಿತ್ರ : 16 ಎಂಡಿಬಿ ಭರತ್ & ಸೂರಜ್
