ಬಂಟ್ವಾಳ: ಶ್ರೀ ಕ್ಷೇತ್ರ ಅರ್ಕುಳ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಪಶ್ಚಿಮ ಹಾಗೂ ದಕ್ಷಿಣ ಗೋಪುರಗಳ ನಿರ್ಮಾಣ ಕಾರ್ಯವು ಕ್ಷೇತ್ರದ ಇತಿಹಾಸದಲ್ಲಿ ಮಹತ್ವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಘಟ್ಟವಾಗಿ ಗುರುತಿಸಲ್ಪಡುವುದಾಗಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಅರ್ಕುಳದಲ್ಲಿ ಗೋಪುರ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು,
ಈ ಪುಣ್ಯ ಕಾರ್ಯವು ಮುಂದಿನ ದಿನಗಳಲ್ಲಿ ಕ್ಷೇತ್ರದ ವೈಭವವನ್ನು ಮತ್ತಷ್ಟು ವೃದ್ಧಿಸುವುದರ ಜೊತೆಗೆ ಭಕ್ತರ ಭಕ್ತಿ ಹಾಗೂ ಶ್ರದ್ಧೆಗೆ ಹೊಸ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿಯವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಕ್ತರ ಸಕ್ರಿಯ ಭಾಗವಹಿಸುವಿಕೆ ಹೊಸ ಚೈತನ್ಯವನ್ನು ಮೂಡಿಸುವುದರ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಪಸರಿಸಲು ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅರ್ಕುಳ ಬೀಡು ರತ್ನರಾಜ ಶೆಟ್ಟಿ, ಎ.ಬಿ. ಅಜಿತ್ ಕುಮಾರ್,ಪ್ರಮುಖರಾದ ಕಂಪ ಸದಾನಂದ ಆಳ್ವ,ಟಿ. ಪುನೀತ್ ಸೇಮಿತ, ಉಳಿದೊಟ್ಟು ಮನೋಜ್, ಮಂಟಮೆ ದಿನಕರ ಕರ್ಕೇರಾ, ಕುಚ್ಚೂರು ಲೋಕಯ್ಯ ಪೂಜಾರಿ, ಪ್ರವೀಣ್ ಅಂಚನ್, ಟಿ. ರಘುನಾಥ ಪೂಜಾರಿ, ಅರ್ಕುಳ ಬೈಲ್ ಮೋನಪ್ಪ ಪೂಜಾರಿ, ಅರ್ಕುಳ ಬಸದಿ ಪುಷ್ಪರಾಜ ಇಂದ್ರ, ತುಪ್ಪೆಕಲ್ಲು ಮನೋಜ್ ಬಂಗೇರಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಡಾ.ಎ.ಜಯಕುಮಾರ ಶೆಟ್ಟಿ ಸ್ವಾಗತಿಸಿದರು. ತುಪ್ಪೆಕಲ್ಲು ನಾಗರಾಜ ಶೆಟ್ಟಿ ವಂದಿಸಿದರು.
