ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮತ್ತು ಜಾತ್ರೆ ಫೆ.13ರಿಂದ ಫೆ.19ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ.ಅಮೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.13ರಂದು ಸಂಜೆ ವಗ್ಗ ಕಾರಿಂಜ ಬಳಿಯಿಂದ ಹೊರಕಾಣಿಕೆ ಸಮರ್ಪಣೆ ಮೆರವಣಿಗೆ, ಧ್ವಜಾರೋಹಣ ನಡೆಯಲಿದೆ, ಫೆ.14 ರಂದು ಬೆಳಗ್ಗೆ ಗಣಹೋಮ, ಅನ್ನ ಸಂತರ್ಪಣೆ, ನಿತ್ಯ ಉತ್ಸವಗಳು ನಡೆಯಲಿದೆ.

ಮಹಾ ಶಿವರಾತ್ರಿ ಜಾಗರಣೆ
ಫೆ.15ರಂದು ಸಂಜೆ ಮಹಾಶಿವರಾತ್ರಿ ಜಾಗರಣೆ, ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಉತ್ಸವ, ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ, ಭಜನೆ, ರಾತ್ರಿ ತುಲಾಭಾರ ಸೇವೆ, ರಂಗಪೂಜೆ, ಶತರುದ್ರಾಭಿಷೇಕ, ಸಾಂಸ್ಕೃತಿಕ ಕಾರ್ಯ ಕ್ರಮ, ಭರತನಾಟ್ಯನಡೆಯಲಿದೆ.
ಫೆ.16ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ತಾಳಮದ್ದಳೆ, `ಯಕ್ಷವಾಸ್ಯಂ ಕಾರಿಂಜ ಇವರಿಂದ ಯಕ್ಷಗಾನ ಪ್ರದರ್ಶನವಿರಲಿದೆ. ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತಿ, ಪರಮೇಶ್ವರ
ದೇವರ ಭೇಟಿ, ಚಂದ್ರ ಮಂಡಲ ಉತ್ಸವ ನಡೆಯಲಿದೆ.
ಫೆ.17ರಂದು ಬೆಳಗ್ಗೆ ಬಲಿ ಉತ್ಸವ ಕವಾಟೋದ್ಘಾಟನೆ, ಮಹಾರಥೋತ್ಸವ, ದೈವದ ನೇಮ, ನಡೆಯಲಿದೆ. ಫೆ.18ರಂದು ರಾತ್ರಿ ಗೀತಾ ಸಾಹಿತ್ಯ ಸಂಭ್ರಮ, ಕಟ್ಟೆ ಪೂಜೆ ಉತ್ಸವ, ರಾತ್ರಿ ಕಟ್ಟೆಪೂಜೆ ಉತ್ಸವಗಳು, ದೇವರ ಶಯನ, ಕವಾಟ ಬಂಧನ, ನಡೆಯಲಿದೆ. ಫೆ.19ರಂದು ಬೆಳಗ್ಗೆ ಕವಾಟೋದ್ಘಾಟನೆ, ವ್ಯಾಘ್ರ ಚಾಮುಂಡಿ ದೈವದ ನೇಮ, ದೇವರ ಅವನೃಥ ಸ್ನಾನ, ಧ್ವಜಾವರೋಹಣ, ಫೆ.20ರಂದು ಬೆಳಗ್ಗೆ ಸಂಪ್ರೋಕ್ಷಣೆ, ಕಲಶ, ಮಹಾಪೂಜೆ, ಅನ್ನಸಂತರ್ಪಣೆ, ಮಹಾ ಮಂತ್ರಾಕ್ಷತೆ, ಫೆ. 21ರಂದು ಶ್ರೀ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ಪವಮಾನಭಿಷೇಕ ಸಹಿತ ನಾಗತಂಬಿಲಗಳು ನಡೆಯಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
