ಬಂಟ್ವಾಳ: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಎಂಆರ್ ಪಿಎಲ್ ಸಂಸ್ಥೆಯು ಸಿ.ಎಸ್.ಆರ್ ನಿಧಿಯಿಂದ  48 ಲಕ್ಷ ರೂ ಮಂಜೂರಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ತಾಲೂಕು ಸಾರ್ವಜನಿಕ  ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶೀಘ್ರದಲ್ಲಿಯೇ ಎಸ್ ಟಿಪಿ ಪ್ಲಾಂಟ್  ಸ್ಥಾಪಿಸಲು ಅಗತ್ಯಕ್ರಮ ಕೈಗೊಳ್ಳುವುದಾಗಿ ಶಾಸಕರು  ಸಭೆಗೆ ತಿಳಿಸಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುಷ್ಪಲತಾ,ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ರೈ,ಉಪತಹಶೀಲ್ದಾರ್ ದಿವಾಕರ್,ಜಿಲ್ಲಾಪಂಚಾಯತ್ ಕಾರ್ಯನಿರ್ವಾಹಕ ಇಂಜಿನೀಯರ್ ತಾರನಾಥ ಸಾಲ್ಯಾನ್,ಪುರಸಭೆಯ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ,ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ವೆಂಕಪ್ಪ ಪೂಜಾರಿ,ಜೋಸೆಫ್ ಪ್ರವೀಣ್ ರಾಡ್ರಿಗಸ್,ಅಶೋಕ್,ರೇಷ್ಮಾ ಟೀಲಿಸ್,ಪುರುಷೋತ್ತಮ ಬಂಗೇರಾ,ಶಿವಾನಂದ ನಾಯ್ಕ ಸೇರಿದಂತೆ ತಾಲೂಕು ಆಸ್ಪತ್ರೆ ವೈದ್ಯರುಗಳು  ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *