ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೀಪ ಪ್ರದಾನ – ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಅತಿಥಿಗಳು ದೀಪ ಪ್ರಜ್ವಲನಗೈದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಸ್ಥೆಯು ನಿಮಗೆ ನೀಡಿದ ರಾಷ್ಟ್ರೀಯ ಚಿಂತನೆ ಎಂಬ ಜ್ಞಾನದ ಬುತ್ತಿಯನ್ನು ಎಲ್ಲಾ ಕಡೆ ಪ್ರಸರಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದರು. ಅಭ್ಯಾಗತರಾದ ಮಣಿಪಾಲ್ ಫೌಂಡೇಶನ್
ಮಹಾಲಕ್ಷ್ಮಿ ನಾಯಕ್ ಅವರು ಮಾತನಾಡಿ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಜನೆಯನ್ನು ಪಡೆದ ವಿದ್ಯಾರ್ಥಿಗಳು ಪುಣ್ಯವಂತರು ,ರಾಷ್ಟ್ರೀಯ ಚಿಂತನೆಯ ಜೊತೆಗೆ ಉತ್ತಮ ನಾಗರಿಕರಾಗಿ ಬೆಳೆದು ಯಶಸ್ಸನ್ನು ಸಾಧಿಸಿ ಎಂದರು.

ಇನ್ನೋರ್ವ ಅತಿಥಿಯಾದ ಪ್ರಸಾದ್ ನೇತ್ರಾಲಯದ ಚೇಯರ್ ಮೆನ್ಡಾ. ಕೃಷ್ಣಪ್ರಸಾದ್ ಮಾತನಾಡಿ, ಗುರು ಹಿರಿಯರು, ಹೆತ್ತವರನ್ನು, ಹಾಗೂ ಶಿಕ್ಷಣವನ್ನು ಒದಗಿಸಿದ ವಿದ್ಯಾಸಂಸ್ಥೆಯನ್ನು ವಿದ್ಯಾರ್ಥಿಗಳ ಎಂದಿಗೂ ಮರೆಯಬಾರದು ಎಂದರು.
ಜ್ಞಾನದ ಸಂಕೇತವಾದ ದೀಪವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಬಿ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾಗೇಶ್ ಕಲ್ಲಡ್ಕ, ಡಾ. ಕಮಲ ಪ್ರಭಾಕರ್ ಭಟ್, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಉಪ ಪ್ರಾಂಶುಪಾಲರಾದ ದಿನೇಶ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಕು. ಶ್ರೇಯ ಸ್ವಾಗತಿಸಿದರು, ಕು. ತೃಷ ವಂದಿಸಿದೆಉ , ಕು. ಕೃತಿಕಾ ಕಾರ್ಯಕ್ರಮವನ್ನು ನಿರ್ವಹಿಸಿದರು.
