ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಗ್ರಾಮದಲ್ಲಿರುವ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ. 18 ರಿಂದ 22 ರವರೆಗೆ ನಾನಾ ವೈದಿಕ-ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಬಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಹೇಳಿದರು.ಅವರು ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯವನ್ನು ಊರಪರ ಊರ ಭಕ್ತರ ಸಹಾಯದಿಂದ ಕೈಗೆತ್ತಿಕೊಂಡಿದ್ದು, ನಿರೀಕ್ಷೆಗೂ ಮೀರಿ ವಿವಿಧ ರೂಪದಲ್ಲಿ ಭಕ್ತರು ಸೇವೆ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಬಹುತೇಕ ಮುಗಿದಿದ್ದು, ಬ್ರಹ್ಮ ಕಲಶ ಉತ್ಸವದ ಕೊನೆಯ ಕ್ಷಣದಲ್ಲಿದ್ದೇವೆ.
ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಬೇರೆ ಬೇರೆ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಗ್ರಾಮಸ್ಥರು ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಶ್ರಮದಾನ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಫೆ. 18 ರಿಂದ 22ರವರೆಗೆ ದೇವಸ್ಥಾನದ ತಂತ್ರಿ ವಿಷ್ಣುಮೂರ್ತಿ ತಂತ್ರಿ ಎಡಪದವು ಅವರ ನೇತೃತ್ವದಲ್ಲಿ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಹಾಗೂ ಪ್ರಶ್ನಾ ಚಿಂತನೆ ನಡೆಸಿದ ಮಿತ್ತೂರು ಕೇಶವ ಭಟ್ ಅವರ ಮಾರ್ಗದರ್ಶನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ದೇಗುಲದಲ್ಲಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ಹಾಗೂ ಧರ್ಮದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವೈಭವದಿಂದ ಜರುಗಲಿದೆ.
ಫೆ.15ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ
ಫೆ. 15 ರಂದು ಮಧ್ಯಾಹ್ನ 2ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಮಂಗಾಜೆ-ಧನುಪೂಜೆ ಮಾರ್ಗವಾಗಿ ಹೊರಟು ಕಲ್ಪನೆಯಲ್ಲಿ ಸೇರಲಿದೆ. ಬಳಿಕ 4ಕ್ಕೆ ಚೆಂಡೆ, ವಾಲಗ, ಕುಣಿತ, ಭಜನೆಯೊಂದಿಗೆ ಕಾಲ್ನಡಿಗೆ ಮೂಲಕ ಕಾವೇಶ್ವರ ಮಾರ್ಗವಾಗಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ಸಾಗಲಿದೆ ಎಂದು ಸಮಿತಿ ಕೋಶಾಧಿಕಾರಿ ಚಂದ್ರಹಾಸ ಪಲ್ಲಿಪಾಡಿ ತಿಳಿಸಿದರು.
ಭಕ್ತರ ಪುಣ್ಯಧಾಮ
ನಿರ್ಮಿಸಲಾಗುತ್ತಿದೆ.ಈ ಗ್ರಾಮದ ಬಹಳಷ್ಠು ಭಕ್ತರ ಇಷ್ಠಾರ್ಥಗಳು ಈಡೇರಿದ,ಹರಕೆ ಹೇಳಿಕೊಂಡು ಬಂದ ಭಕ್ತರ ಕಷ್ಟಕಾರ್ಪಣ್ಯಗಳು ಪರಿಹರಿಸಿಕೊಂಡಿರುವ ಮಹಿಮೆಯನ್ನು ಈ ಕ್ಷೇತ್ರಹೊಂದಿದೆ ಎಂದು
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ ತಿಳಿಸಿದರ
ಫೆ.18 ರಿಂದ 22 ರ ವರೆಗೆ ನಿತ್ಯ ವಿವಿಧ ವೈಧಿಕ ,ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನದಾನ ನಡೆಯಲಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ತಿಳಿಸಿದರು. ಫೆ.22 ರಂದು ದೇವರ ಬಿಂಬ ಪ್ರತಿಷ್ಢೆ,ಪಂಚಾಮೃತ ಅಭಿಷೇಕ, ಪರಿಕಲಶಾಭಿಷೇಕ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ .
ಫೆ.19,20 ಮತ್ತು 22 ರಂದು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು ಧಾರ್ಮಿಕ ,ಸಾಮಾಜಿಕ ಹಾಗೂ ರಾಜಕೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಪ್ರಮುಖರಾದ ಉಮೇಶ್ ಸಾಲಿಯಾನ್ ಬೆಂಜನಪದವು, ವಸಂತ ಬೆಳ್ಳೂರು, ಶಶಿಕಿರಣ ಪೂಜಾರಿ, ವಾಮನ ಪೂಜಾರಿ, ದಿನೇಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
