ಬಂಟ್ವಾಳ: ಮಾಧ್ಯಮ ಸಂಸ್ಥೆಯೊಂದು ಕೊಡಮಾಡುವ ರಾಜ್ಯಮಟ್ಟದ” ಸಹಕಾರ ಶಿರೋಮಣಿ -2025″ ಪ್ರಶಸ್ತಿಗೆ
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾದ ಪ್ರಭಾಕರ ಪ್ರಭುಅವರು ಭಾಜನರಾಗಿದ್ದಾರೆ.

ಕನಿಷ್ಠ ದಿನಗಳಲ್ಲಿ ಸಹಕಾರ ಸಂಘವನ್ನು ಅಭಿವೃದ್ದಿ ಪಡಿಸಿದ್ದಲ್ಲದೆ ವಿದ್ಯಾರ್ಥಿಗಳು,ರೈತರಿಗೆ ಸಾಲ ಸೌಲಭ್ಯ,ಟೈಲರಿಂಗ್ ಸಹಿತ ವಿವಿಧ ಉಚಿತ ತರಬೇತಿಗಳನ್ನು ನೀಡಿ ಜನಪರ ಸಂಘವನ್ನಾಗಿ ರೂಪಿಸಿರುವುದು ಮಾಧ್ಯಮ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ದ.ಕ.ಜಿಲ್ಲೆಯಿಂದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾದ ಪ್ರಭಾಕರ ಪ್ರಭು ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಸಚಿವರುಗಳಾದ ಶಿವಾನಂದ ಪಾಟೀಲ್, ಚೆಲುವರಾಯ ಸ್ವಾಮಿ,ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್,ಪತ್ರಕರ್ತ ರವಿಹೆಗ್ಡೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
