ಅರ್ಕುಳಶ್ರೀ ಕ್ಷೇತ್ರ ಅರ್ಕುಳ ಧರ್ಮದೇವತೆಗಳ ಅನುಗ್ರಹ ಹಾಗೂ ಭಕ್ತಾದಿಗಳ ನಿರಂತರ ಸಹಕಾರದಿಂದ ಕ್ಷೇತ್ರದಲ್ಲಿ ಅನೇಕ ಧಾರ್ಮಿಕ ಹಾಗೂ ಕ್ಷೇತ್ರಾಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತಿರುವುದು ನಮಗೆಲ್ಲರಿಗೂ ಅಪಾರ ಸಂತೋಷದ ವಿಷಯವಾಗಿದೆ.

ಇದೇ ಪುಣ್ಯಪರಂಪರೆಯನ್ನು ಮುಂದುವರೆಸುವ ಉದ್ದೇಶದಿಂದ, ಈ ವರ್ಷ ಶ್ರೀ ದೈವಸ್ಥಾನದಲ್ಲಿ ನೂತನ ಕಾಷ್ಠ ಶಿಲ್ಪದ ಅಶ್ವರಥದ ನಿರ್ಮಾಣವಾಗುತ್ತಿದೆ ಎಂದು ಅರ್ಕುಳ ಬೀಡು ವಜ್ರನಾಭ ಶೆಟ್ಟ ಅವರು ತಿಳಿಸಿದರು.
ಫೆಬ್ರವರಿ 22 ರಿಂದ ಮಾರ್ಚ್ 1 ರವರೆಗೆ ನಡೆಯಲಿರುವ ಅರ್ಕುಳ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಅರ್ಕುಳ ಬೀಡಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ನೂತನ ರಥದ ಶೋಭಾಯಾತ್ರೆಯು ರವಿವಾರ ಪೆಬ್ರವರಿ 15 ರಂದು ಸಂಜೆ 4 ಗಂಟೆಗೆ ಸೇವಾಂಜಲಿ ಸಭಾಗ್ರಹದಿಂದ ಹೊರಟು ಶ್ರೀ ಕ್ಷೇತ್ರ ಅರ್ಕುಳಕ್ಕೆ ಪ್ರವೇಶ ಮಾಡಲಿದೆ ಎಂದುಕಂಪ ಸದಾನಂದ ಆಳ್ವ ಅವರು ತಿಳಿಸಿದರು. ಶೋಭಾಯಾತ್ರೆಯಲ್ಲಿ ಕುಣಿತ ಭಜನಾ ತಂಡ ಹಾಗೂ ಭಕ್ತರು ಭಾಗವಹಿಸಲಿದ್ದಾರೆ ಎಂದು ತುಪ್ಪೆಕಲ್ಲು ನಾಗರಾಜ ಶೆಟ್ಟಿ ತಿಳಿಸಿದರು. ಟಿ.ರಘುನಾಥ ಪೂಜಾರಿ ಮೆರವಣಿಗೆಯ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಡಾ.ಎ.ಜಯಕುಮಾರ ಶೆಟ್ಟಿ ಸ್ವಾಗತಿಸಿ, ಮಂಟಮೆ ದಿನಕರ ಕರ್ಕೇರಾ ವಂದಿಸಿದರು.
