ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ ( ರಿ.) ಬಾಳ್ತಿಲ ಮತ್ತು ಜವಾಹರ್ ಬಾಲ್ ಮಂಚ್ ದ.ಕ. ಇದರ ಸಂಯುಕ್ತಾಶ್ರಯದಲ್ಲಿ “ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ” ಹಾಗೂ “ಗಿರಿಜಾರತ್ನ ರಾಜ್ಯಪ್ರಶಸ್ತಿ ಪ್ರದಾನ”ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.
ಬಿ.ಸಿ.ರೋಡಿನ ನೋಟರಿ ಹಾಗೂ
ಹಿರಿಯ ವಕೀಲರಾದ ಎಂ.ಅಶ್ವನಿಕುಮಾರ್ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ, ಮಹಿಳೆಯರು ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವಂತಹ ಅವಕಾಶಗಳು ಒದಗಿಬರಲಿ ಇಂತಹಾ ಕಾರ್ಯಕ್ರಮಗಳು ಹೆಚ್ಚುಹೆಚ್ಚು ನಡೆಯಲಿ ಎಂದು ಅಶಯ ವ್ಯಕ್ತಪಡಿಸಿದರು.

ಮಾಜಿಸಚಿವ ಬಿ.ರಮಾನಾಥ ರೈ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ಉದ್ಯಮಿ ಶೈಲೇಂದ್ರ , ಮಾಜಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್,ಬೂಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಡಾ.ಶಶಿಕಲಾ ಆರ್ ಸೋಮಯಾಜಿ ,ಶಿಕ್ಷಕಿ ಸಂಗೀತಾ ಶರ್ಮ, ಡಾ.ಸಂಶದ್ ಕುಂಜತ್ತ್ ಬೈಲ್, ಪ್ರಭಾ ನಾರಾಯಣ ಸುವರ್ಣ, ಜವಾಹರ್ ಬಾಲ್ ಮಂಚ್ ಇದರ ರಾಜ್ಯಾಧ್ಯಕ್ಷ ಶೌರ್ಯ , ಪ್ರಕಾಶ್ ಕೆರ್ವಾಸೆ, ಕೃಷ್ಣ ಸುವರ್ಣ, ಬಾಲಕೃಷ್ಣ ಅಂಚನ್, ರಾಜೇಶ್ ಪೂಜಾರಿ ಮೊದಲಾದವರು ವೇದಿಕೆಯಲ್ಲಿದ್ದರು.
“ಗಿರಿಜಾರತ್ನ ರಾಜ್ಯಪ್ರಶಸ್ತಿ ಪ್ರದಾನ”
ಇದೇ ವೇಳೆ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯಿಂದ ಅರಿವಳಿಕೆ ತಜ್ಞೆ ಡಾ| ಶಶಿಕಲಾ ಆರ್ ಸೋಮಾಯಾಜಿ, ಸಮಾಜಸೇವಕಿ ಸುಜಿತಾ ವಿ.ಬಂಗೇರ ಬೆಳ್ತಂಗಡಿ, ಶಿಕ್ಷಕಿ ಸಂಗೀತಾ ಶರ್ಮ , ಸಮಾಜ ಸೇವಕಿ ಡಾ. ಸಂಶದ್ ಕುಂಜತ್ ಬೈಲ್, ಸಮಾಜ ಸೇವಕಿ ಪ್ರಭಾ ನಾರಾಯಣ ಸುವರ್ಣ ರವರಿಗೆ ಗಿರಿಜಾ ರತ್ನ ಪ್ರಶಸ್ತಿ ಪ್ರದಾನಗೈದು ಸನ್ಮಾನಿಸಲಾಯಿತು.
ವಿವಿಧ ವಯಸ್ಸಿನ ಮಕ್ಕಳಿಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ,ಮೆಹಂದಿ ಸ್ಪರ್ಧೆ ,ಮಕ್ಕಳು ಮತ್ತು ಮಹಿಳೆಯರಿಗೆ ಬೆಂಕಿ ಬಳಸದೆ ಅಡುಗೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ,ನೃತ್ಯ ಸ್ಪರ್ಧೆ ಹಾಗೂ ಮಹಿಳೆಯರು ತಾವೇ ಮನೆಯಲ್ಲಿ ತಯಾರಿಸಿದ ಸ್ವಾದಿಷ್ಟ ಸವಿರುಚಿ ಸ್ಪರ್ಧೆ ನಡೆಯಿತು.
ಕ್ಯಾನ್ಸರ್ ಪೀಡಿತರು, ವಿಕಲ ಚೇತನರು ಮತ್ತು ಅಸಕ್ತರಿಗೆ ಸಹಾಯಧನ ವಿತರಿಸಲಾಯಿತು.
ಅದೇರೀತಿ “ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಮಹಿಳೆಯ ಶಕ್ತಿಯಾಗಿ ಮೂಡಿಬಂದ ದಿ.ಇಂದಿರಾ ಗಾಂಧಿ ” ಸಂವಾದ ,ಸಮಾಜದಲ್ಲಿ ಮಕ್ಕಳು ಮತ್ತು ಮಹಿಳೆಯರ ಪಾತ್ರ , ಕಾನೂನು ಸುವ್ಯವಸ್ಥೆ, ಕುಟುಂಬ ಪ್ರೀತಿ -ಸಂಸ್ಕಾರ ಮಹತ್ವ ಮತ್ತು ಮಾಧಕ ವ್ಯಸನ ಮುಕ್ತ ಭಾರತ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಿದರು.
. ಜವಾಹರ್ ಬಾಲ್ ಮಂಚ್ ವತಿಯಿಂದ ಕಳೆದ ವರ್ಷ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಐವರು ಬಾಲ ಪ್ರತಿಭೆಗಳನ್ನು ಅಭಿನಂದಿಸಲಾಯಿತು.
ಇದಕ್ಕು ಮೊದಲು ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಸಲಾಯಿತು.
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ,ನ್ಯಾಯವಾದಿ ಶೈಲಜಾ ರಾಜೇಶ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಯತೀಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
