ಮಂಗಳೂರು: ದಿನಾಂಕ 16-12-2014 ರಂದು ಹಿಂದೂಜನಜಾಗೃತಿ ಸಮಿತಿ ವತಿಯಿಂದ ಡಿಸೆಂಬರ್ 31 ರ ರಾತ್ರಿ ತೀರ್ಥಕ್ಷೇತ್ರ, ಪ್ರವಾಸಿತಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿಹೊಸ ವರ್ಷದ ಹೆಸರಿನಲ್ಲಿ ನಡೆಯುವ ಅನುಚಿತ ಕುಸಂಸ್ಕಾರ ತಡೆಯುವ ಬಗ್ಗೆ ಜಿಲ್ಲಾಧಿಕರಿಗೆ ಮನವಿ ಸಲ್ಲಿಸಲಾಯಿತು.

hjs
ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿಯ ಬಗ್ಗೆ ವಿವರಿಸಿದಾಗ ಕ್ರಮ ಕೈಗಳ್ಳುವುದಾಗಿ ತಿಳಿಸಿದರು. ಮನವಿಯಲ್ಲಿ ಪ್ರಸ್ತುತ ಪಾಶ್ಚಾತ್ಯರ ಅಂಧಾನುಕರಣೆಯಿಂದ ಭಾರತದಲ್ಲಿಯೂ ಹೊಸವರ್ಷವನ್ನು ಯುಗಾದಿಯ ಬದಲು ಡಿಸೆಂಬರ್ 31 ರ ಮಧ್ಯರಾತ್ರಿ 12 ಗಂಟೆಗೆ ಆಚರಿಸುವ ಕೆಟ್ಟ ರೂಢಿ ಹೆಚ್ಚಾಗಿದೆ. ಈ ರಾತ್ರಿ ಯುವಕರು ಮದ್ಯಪಾನ ಮಾಡುವುದು ಮತ್ತು ಅಮಲು ಪದಾರ್ಥ ಸೇವಿಸುವ ಪ್ರಮಾಣ ಹೆಚ್ಚಾಗಿದೆ ಹಾಗೂ ಜೋರಾಗಿ ವಾಹನ ಚಲಾಯಿಸಿ ಅಪಘಾತವಾಗುವುದು ಸಹ ನಡೆಯುತ್ತಿದೆ. ಕೆಲವು ಸ್ಥಳಗಳಲ್ಲಿ ಇಡೀ ರಾತ್ರಿ ಪಟಾಕಿ ಸಿಡಿಸಿ ಮಾಲಿನ್ಯ ಮಾಡುವುದು, ಕರ್ಣಕರ್ಕಶ ಧ್ವನಿವರ್ಧಕದಲ್ಲಿ ಹಾಡು ಹಾಕಿ ಅಶ್ಲೀಲ ನೃತ್ಯ ಮಾಡುವುದು ಮತ್ತು ಅಪಶಬ್ದ ಮಾತನಾಡುವುದು ನಡೆಯುತ್ತಿದೆ. ಯುವತಿಯರನ್ನು ಛೇಡಿಸುವುದು ಮುಂತಾದವುಗಳಿಂದ ಕಾನೂನು ಸುವ್ಯವಸ್ಥೆಯ ತೀರಾ ಹದಗೆಡುತ್ತಿದೆ. ಆದುದರಿಂದ ಆರಕ್ಷಕ ಇಲಾಖೆಯ ಮೇಲೆ ಅದರ ಹೆಚ್ಚುವರಿ ಒತ್ತಡ ಬರುತ್ತದೆ. ಹಾಗಾಗಿ ಡಿಸೆಂಬರ್ 31 ರಂದು ತೀರ್ಥಕ್ಷೇತ್ರ, ಪ್ರವಾಸೀತಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕ್ರೈಸ್ತ ಹೊಸ ವರ್ಷದ ಹೆಸರಿನಲ್ಲಿ ನಡೆಯುವ ಅನುಚಿತ ಕುಸಂಸ್ಕಾರ ತಡೆಯಲು ಸಂಬಂಧಿತರಿಗೆ ಯೋಗ್ಯ ಆದೇಶ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ ಎಂಬ ಮುಂತಾದ ವಿಚಾರಗಳನ್ನು ಮನವಿಯಲ್ಲಿ ತಿಳಿಸಲಾಗಿದೆ

By suddi9

Leave a Reply

Your email address will not be published. Required fields are marked *