ಮಂಗಳೂರು: ಬಿಜೆಪಿ ದ.ಕ.ಜಿಲ್ಲಾ ಕಾರ್ಯಕಾರಿಣಿ ಹಾಗೂ ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆಯು ದಿನಾಂಕ 13.12.2014ರಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ, ಜಿಲ್ಲಾ ಅಧ್ಯಕ್ಷರಾದ ಪ್ರತಾಪಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ದಂತ ವೈದ್ಯಕೀಯ ಅಸೋಸಿಯೇಶನಿನ ಉಪಾಧ್ಯಕ್ಷರಾಗಿ ನೇಮಕರಾದ ಬಿಜೆಪಿ ಜಿಲ್ಲಾ ಕಾರ್ಯದಶರ್ಿಯಾದ ಡಾ| ವೈ.ಭರತ್ ಶೆಟ್ಟಿ ಮತ್ತು ಅಮೇರಿಕದಲ್ಲಿ ಡಿಪ್ಲೋಮಾ ಶಿಕ್ಷಣ ಯಶಸ್ವಿಯಾಗಿ ಮುಗಿಸಿದ ರಾಷ್ಟ್ರೀಯ ಬಿಜೆಪಿ ಯುವಮೋಚರ್ಾ ಉಪಾಧ್ಯಕ್ಷ ಶ್ರೀ ವಿಕಾಸ್ ಪುತ್ತೂರು ಇವರುಗಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಕಾರ್ಯದಶರ್ಿ ಶ್ರೀ ಅಶೋಕ್ರವರು ಜಿಲ್ಲಾ ಸದಸ್ಯತಾ ಅಭಿಯಾನದ ವರದಿಯನ್ನು ಒಪ್ಪಿಸಿದರು. ಬಂಟ್ವಾಳ ಪುರಸಭೆಯ ಆಡಳಿತ ವೈಖರಿಯ ವಿರುದ್ಧ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ದೇವದಾಸ ಶೆಟ್ಟಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆಸಿದ ಹೋರಾಟದ ಬಗ್ಗೆ ವರದಿ ಪಡೆಯಲಾಯಿತು.

04.12.2014ರಂದು ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರಕಾರವು ವಿಫಲವಾಗಿರುವುದನ್ನು ಖಂಡಿಸಿ ಮತ್ತು ಕನರ್ಾಟಕ ರಾಜ್ಯ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ, ಭಾರತೀಯ ಜನತಾ ಪಾಟರ್ಿ ಮಹಿಳಾ ಮೋಚರ್ಾ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ದಿನಾಂಕ ಮಂಗಳೂರಿನಲ್ಲಿ ನಡೆದ ರಾಸ್ತಾ ರೋಕೋ ಜೈಲ್ ಭರೋ ಕಾರ್ಯಕ್ರಮದ ವರದಿಯನ್ನು ಶ್ರೀಮತಿ ಮಲ್ಲಿಕಾ ಪ್ರಸಾದ್ರವರು ಮಂಡಿಸಿದರು. ಸುಮಾರು 1000 ಮಹಿಳೆಯರು ಭಾಗವಹಿಸಿದ್ದರು.
ದಿನಾಂಕ 26-11-2014 ರಂದು ಭೂಹಗರಣದಲ್ಲಿ ಶಾಮೀಲಾಗಿರುವ ರಾಜ್ಯದ ಗೃಹ ಸಚಿವರಾದ ಶ್ರೀ ಕೆ.ಜೆ.ಜಾಜರ್್ರವರು ಮಂಗಳೂರಿಗೆ ಬಂದಾಗ ಅವರ ವಿರುದ್ಧ ಜಿಲ್ಲಾ ಯುವ ಮೋಚರ್ಾದ ವತಿಯಿಂದ ಕಪ್ಪು ಬಟ್ಟೆ ಪ್ರದಶರ್ಿಸಿ ಪ್ರತಿಭಟನೆ ನಡೆಸಲಾಯಿತು. ಸುಮಾರು 500 ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಜಿಲ್ಲಾ ಬಿ ಜೆ ಪಿ ಯುವಮೋಚರ್ಾ ಪ್ರಾಧಾನ ಕಾರ್ಯದಶರ್ಿ ಶ್ರಿ ಪ್ರಥ್ವಿರಾಜ್ ಯು.ಬಿ. ವರದಿ ಮಂಡಿಸಿದರು.
ದಿನಾಂಕ 21-11-2014 ರಂದು ಮೂಡಬಿದ್ರೆ ಹಿಂದುಳಿದ ವರ್ಗ ಮೋಚರ್ಾ ಮತ್ತು ಮಂಡಲದಿಂದ ಪ್ರತ್ಯೇಕ ತಾಲೂಕು ಬೇಡಿಕೆ ಇಟ್ಟು ಹೋರಾಟ ನಡೆಸಿದ ವರದಿಯನ್ನು ಮಂಡಲದ ಪ್ರಧಾನ ಕಾರ್ಯದಶರ್ಿ ಶ್ರಿ ನಾಗರಾಜ ಪೂಜಾರಿಯವರು ಮಂಡಿಸಿದರು. ಸುಮಾರು 700 ಕಾರ್ಯಕರ್ತರು ಭಾಗವಹಿಸಿದ್ದರು.
ಈವರೆಗಿನ ಸದಸ್ಯತ್ವ ಅಭಿಯಾನದ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಜಿಲ್ಲೆಯಲ್ಲಿ ಹಾಗೂ ವಿವಿಧ ಮಂಡಲಗಳಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳು ಹಾಗೂ ಹೋರಾಟದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದಶರ್ಿ ಶ್ರೀ ನಿರ್ಮಲ ಕುಮಾರ್ ಸುರಾನ ರವರು ಸದಸ್ಯತ್ವ ಅಭಿಯಾನದ ಕಾರ್ಯಯೋಜನೆಯ ಬಗ್ಗೆ ಪವರ್ ಪಾಯಿಂಟ್ ಪ್ರಸಂಟೇಶನ್ (ಪಿ ಪಿ ಟಿ) ಮಾಡಿದರು. ಭಾರತ್ ಮಾತಾ ಪೂಜನಾ ಕಾರ್ಯಕ್ರಮ ಮತ್ತು ವಿವೇಕ್ ಬ್ಯಾಂಡ್ ಅಭಿಯಾನದ ಬಗ್ಗೆ ಸಾಂಸದ ಶ್ರೀ ನಳಿನ್ ಕುಮಾರ್ ಕಟೀಲು ಮಾಹಿತಿ ನೀಡಿದರು.
ಮಂಡಲ ಕಾರ್ಯಕಾರಿಣಿ ಸಭೆಯ ದಿನಾಂಕಗಳನ್ನು ಪಡೆಯಲಾಯಿತು. ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಸದಸ್ಯತ್ವ ಅಭಿಯಾನ ಪ್ರಮುಖ್ ಶ್ರೀ ಸಂಜೀವ ಮಠಂದೂರು, ಕೋಟ ಶ್ರೀನಿವಾಸ ಪೂಜಾರಿ ಮತ್ತು ಸದಸ್ಯತಾ ಸಹಪ್ರಮುಖ್ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ವಿಭಾಗ ಸಂಘಟನಾ ಕಾರ್ಯದಶರ್ಿ ಶ್ರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅರುಣ್ ಶೇಟ್ ಅವರು ವಂದೇ ಮಾತರಂ ಹಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ದೇವದಾಸ್ ಶೆಟ್ಟಿ ನಿರ್ವಹಿಸಿದರು. ಕಿಶೋರ್ ರೈ ಯವರು ಸ್ವಾಗತಿಸಿದರು. ಶ್ರೀಮತಿ ಕಸ್ತೂರಿ ಪಂಜರವರಿಂದ ಪ್ರಸ್ತಾವನೆ ಮಾಡಿದರು.


