ಕಾಸರಗೋಡು: ಇಸ್ಲಾಮಿಕ್ ಬ್ಯಾಂಕಿನ ಹೆಸರಿನಲ್ಲಿ ಬಡ್ಡಿ ರಹಿತ ಚಿನ್ನ ಸಾಲದ ಭರವಸೆ ನೀಡಿ ಹಲವರಿಂದ ರೂ.50 ಕೋಟಿ ಬೆಲೆಬಾಳುವ ಚಿನ್ನಾ ಭರಣ ಎಗರಿಸಿದ ಆರೋಪಿ ಕಾಸರ ಗೋಡು ನಗರ ಠಾಣೆಯ ಲಾಕಪ್ ನಿಂದ ಪರಾರಿಯಾಗಿರುವ ಘಟನೆ ನಿನ್ನೆ ಮುಂಜಾನೆ ವೇಳೆ ನಡೆದಿದೆ.
ಮಲಪ್ಪುರಂ ಜಿಲ್ಲೆಯ ಕೊಂಡೋಟ್ಟಿ ನಿವಾಸಿ ಮಹಮ್ಮದ್ ಜಲಾಲುದ್ದೀನ್(32) ಪರಾರಿಯಾದ ಆರೋಪಿ.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ವಿರುದ್ಧ ಅಮಾನತು ಕ್ರಮ ಉಂಟಾಗುವುದು ನಿಖರವಾಗಿದೆ. ಸರ್ಕಲ್ ಇನ್ಸ್‍ಪೆಕ್ಟರ್ ಅವರ ವರದಿ ಬಳಿಕ ಕ್ರಮಕೈಗೊಳ್ಳುವುದಾಗಿ ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಠಾಣೆಯಲ್ಲಿ ಪೊಲೀಸರ ಸಂಖ್ಯೆ ವಿರಳವಾಗಿದ್ದರಿಂದ ಆರೋಪಿ ಪರಾ ರಿಯಾಗಿರುವುದಾಗಿ ತಿಳಿದುಬಂದಿದ್ದು, ಅಲ್ಲದೆ ಲಾಕಪ್ ಹೊರಗಿನಿಂದ ಚಿಲಕವನ್ನೂ ಹಾಕಿರಲಿಲ್ಲವೆನ್ನಲಾಗಿದೆ. ಈ ಹಿಂದೆ ಮಲಪ್ಪುರಂನಲ್ಲಿ ಲೈಫ್ ಲೈನ್ ಬ್ಯಾಂಕರ್ಸ್ ಆಫ್ ಮಲಬಾರ್ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ನಡೆಸಿ ಹಲವರಿಂದ ಚಿನ್ನವನ್ನು ಪಡೆದು ವಂಚಿಸಿದ್ದ. ಇದರಿಂದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನ ಕಳೆದುಕೊಂ ಡಿದ್ದ ಮಲಪ್ಪುರಂನ ಮುಸ್ತಾಫ ಎಂಬ ವರು ಡೆತ್‍ನೋಟಲ್ಲಿ ಜಲಾಲುದ್ದೀನ್ ಹೆಸರು ಬರೆದು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಘಟನೆ ಬಳಿಕ ಅಲ್ಲಿಂದ ಪರಾರಿಯಾಗಿ ಕಾಸರಗೋಡಿನಲ್ಲಿ ಬಂದು ನೆಲೆಸಿದ್ದ ಜಲಾಲುದ್ದೀನ್ ಇಲ್ಲಿಯೂ ಸಂಸ್ಥೆಯೊಂದನ್ನು ಆರಂ ಭಿಸಿದ್ದ. ಆದರೆ ಈತನ ವಂಚನೆ ಬಗ್ಗೆ ತಿಳಿದಿದ್ದ ಸ್ಥಳೀಯರೊಬ್ಬರು ಕಾಸರ ಗೋಡಿನಲ್ಲಿ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವೇಳೆ ಕಾಸರಗೋಡು ಪೊಲೀಸರು ಬಂಧಿಸಿ ದ್ದರು. ನಿನ್ನೆ ಮುಂಜಾನೆ ಲಾಕಪ್ ನಿಂದ ಪರಾರಿಯಾಗಿದ್ದಾನೆ.
