ಮೂಡುಬಿದಿರೆ: ಆಕೆ ಬೋರುಗುಡ್ಡೆಯ ದೂಜ ಮೂಲ್ಯ-ವಸಂತಿ ದಂಪತಿಯ ತೃತೀಯ ಪುತ್ರಿ ರೇವತಿ. ಅಂಧೆಯಾದರೇನಂತೆ ಆಕೆಯ ಬಾಳಿಗೆ ಬೆಳಕು ನೀಡುವಲ್ಲಿ ವಿಕಲಚೇತನನೊಬ್ಬ ಮುಂದಾಗಿದ್ದು ಅದೂ ಅಂತರ್ಜಾತಿ ಮದುವೆಯಾಗುವುದರೊಂದಿಗೆ. ಹೀಗೊಂದು ಆದರ್ಶ ಮದುವೆಗೆ ಸೋಮವಾರ ಇಲ್ಲಿನ ಬೋರುಗುಡ್ಡೆಯ ಶ್ರೀಸತ್ಯನಾರಯಣ ದೇವಸ್ಥಾನ ಸಾಕ್ಷಿಯಾಗಿದೆ.

borugudde marriege

ಕಾಲುಗಳಲ್ಲಿ ಸ್ವಾದೀನವಿಲ್ಲದ ವಿಕಲಚೇತನ, ಕೆರ್ವಾಶೆ ನಿವಾಸಿ, ಲಕ್ಷ್ಮಣ ಎಂಬವರು ನಾರಾವಿಯ ಅಂಧೆ ರೇವತಿ ಎಂಬವರನ್ನು ದೇವಸ್ಥಾನದಲ್ಲಿ ವರಿಸಿದ್ದಾರೆ. ಸದಾನಂದ ನಾಯ್ಕ್-ದಿ.ಸವಿತಾ ದಂಪತಿಯ ತೃತೀಯ ಪುತ್ರ.

ಸತ್ಯನಾರಾಯಣ ತಂತ್ರಿ ಅವರ ಪೌರೋಹಿತ್ಯದಲ್ಲಿ ಸರಳ ರೀತಿಯಲ್ಲಿ ಮದುವೆ ನಡೆದಿದೆ. ಮದುವೆಯನ್ನು ಎರಡೂ ಕಡೆಯವರು ಮುಂದೆ ನಿಂತು ಮಾಡಿದ್ದಾರೆ. ಪಂಚಾಯತ್ ಸದಸ್ಯ ಜಯಂತ್ ಹೆಗ್ಡೆ, ಸಂತೋಶ್ ಕುಮಾರ್, ಉದಯ ಪೂಜಾರಿ, ಸಮಿತ್ ರಾಜ್ ದರೆಗುಡ್ಡೆ, ನಾರಾಯಣ ಸೆಮಿನಾ, ರಮೇಶ್ ಬೋರುಗುಡ್ಡೆ, ಸತೀಶ್ ಟೈಲರ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *