ಬಂಟ್ವಾಳ:ಕಾಲೇಜಿನ ಕುಂದು ಕೊರತೆಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತಿಳಿಸಿದರು.ಶನಿವಾರ ಬಂಟ್ವಾಳ ತಾಲೂಕಿನ ಸಜೀಪಮೂಡ ಸರಕಾರಿ ಪದವಿಪೂರ್ವ ಕಾಲೇಜಿನ 2025–2026 ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಜೀಪ ಮಾಗಣೆತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲು ಒಳ್ಳೆಯ ಸಾಧನೆ ಮಾಡಿ ಹೆತ್ತವರು,ಊರಿಗೆ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದು ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಎಸ್ .ಜೈರಾಬಿ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಿ ಮಾತನಾಡಿ ಕಠಿಣ ಪರಿಶ್ರಮದ ಮೂಲಕ ಕಾಲೇಜಿಗೆ ಒಳ್ಳೆಯ ಫಲಿತಾಂಶವನ್ನು ತರುವಂತೆ ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಶ್ರೀಕಾಂತ್ ಶೆಟ್ಟಿ. ಉಪ ಪ್ರಾಂಶುಪಾಲೆ ಜ್ಯೋತಿ, ಉಪನ್ಯಾಸಕರಾದ ಸಂಧ್ಯಾ, ಭಾರತಿ,ಗಾಯತ್ರಿ,ಸುರೇಶ್ ಐತಾಳ್, ಶೋಭಾ,ಬಾಲಕೃಷ್ಣ ನಾಯಕ್, ಸುಂದರಿ,ಬಾಲಕೃಷ್ಣ ಎನ್ .ವಿ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ್ ಬೆಲ್ಚಡ,ಈಶ್ವರಮಂಗಲ ಶ್ರೀಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ ಪೆರ್ವ,ಗ್ರಾ.ಪಂ. ಸದಸ್ಯರಾದ ಸೀತಾರಾಮ ಅಗೋಳಿ ಬೆಟ್ಟ, ಜಯಪ್ರಕಾಶ್ ಪೆರ್ವ,ಸುರೇಶ್ ಬಂಗೇರ, ನಿತಿನ್ ಅರಸ,ವಿಶ್ವನಾಥ ಕೊಟ್ಟಾರಿ,ಸುರೇಶ್ ಶೆಟ್ಟಿ, ಕೆ.ವೀರೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು
