ಬಂಟ್ವಾಳ:ಗ್ರಾಮೀಣ ಕ್ರೀಡೆ ಕಬಡ್ಡಿಗೆ ವಿಶ್ವಮಾನ್ಯತೆ ದೊರೆತಿದ್ದು, ಯುವಜನತೆ ನಿಯಮಿತ ವ್ಯಾಯಾಮ ಮತ್ತು ಆಹಾರ ಸೇವನೆ ಮೂಲಕ ಆರೋಗ್ಯ ಕಾಯ್ದುಕೊಂಡಾಗ ಸಾಧನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ನ್ಯಾಯಾಧೀಶ ದಿನೇಶ್ ಹೆಗ್ಡೆ ಬದ್ಯಾರು ಹೇಳಿದ್ದಾರೆ.


ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ಸಮಾಪನಗೊಂಡ 41ನೇ ವರ್ಷದ ಅಂತರ್ ರಾಜ್ಯ ಮಟ್ಟದ ಪುರುಷರ 55 ಕೆಜಿ ಮತ್ತು 65 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಶುಭ ಹಾರೈಸಿದರು. ಉದ್ಯಮಿ ಮಂಜುನಾಥ ಆಚಾರ್ಯ, ನಿತ್ಯಾನಂದ ಪೂಜಾರಿ ಕೆಂತಲೆ, ಹಷರ್ೇಂದ್ರ ಟಿ.ಪೈ ಮಾತನಾಡಿದರು.


ಇದೇ ವೇಳೆ ಮಹಿಳಾ ಕಬಡ್ಡಿ ವಿಶ್ವಕಪ್ ಚಿನ್ನದ ಪದಕ ವಿಜೇತೆ ಧನಲಕ್ಷ್ಮಿ ಪೂಜಾರಿ ಇವರಿಗೆ ‘ಸ್ವಸ್ತಿಸಿರಿ’ ರಾಜ್ಯ ಪ್ರಶಸ್ತಿ ಮತ್ತು ನಾಟಿ ವೈದ್ಯ ತಿಮ್ಮಪ್ಪ ಪೂಜಾರಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ ಬಂಗೇರ, ಮುಕ್ತಾ ಶೆಟ್ಟಿ, ದೀಕ್ಷಿತ್ ಬಳ್ಳಮಂಜ ಇವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಪ್ರಮುಖರಾದ ಕೆ.ಮೋನಪ್ಪ ಪೂಜಾರಿ, ಜಯಚಂದ್ರ ಬೊಳ್ಮಾರ್, ಕೆ.ಕರುಣೇಂದ್ರ ಪೂಜಾರಿ, ಅಬ್ದುಲ್ ನಝೀರ್ ಸಾಹೇಬ್, ಚಂದ್ರಶೇಖರ ಶೆಟ್ಟಿಗಾರ್, ಕಾಂತಪ್ಪ ಕರ್ಕೇರ, ಹರೀಶ ಪ್ರಭು, ಪ್ರಮೋದ್, ಸಂಘದ ಗೌರವಾಧ್ಯಕ್ಷ ಅಬ್ದುಲ್ಲ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಸಂಚಾಲಕ ರಾಜೇಶ ಪಿ.ಬಂಗೇರ, ಸಹ ಸಂಚಾಲಕ ಅಬ್ದುಲ್ ಹಮೀದ್, ಮಾಜಿ ಅಧ್ಯಕ್ಷ ಮಾಧವ ಬಂಗೇರ, ರಫೀಕ್, ಪುರುಷೋತ್ತಮ ಶೆಟ್ಟಿಗಾರ್ ಮತ್ತಿತರರು ಇದ್ದರು.
ಪ್ರಭಾಕರ ಪಿ.ಎಂ. ಸ್ವಾಗತಿಸಿ, ಫ್ರಾನ್ಸಿಸ್ ವಿ.ವಿ. ವಂದಿಸಿದರು.

By suddi9

Leave a Reply

Your email address will not be published. Required fields are marked *