ಬಂಟ್ವಾಳ: ಸಮಾಜಮುಖಿ ಕಾರ್ಯದೊಂದಿಗೆ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಸಂಘಟನೆಯ ಮಹತ್ತರ ಕೆಲಸ ಶ್ಲಾಘನೀಯವಾಗಿದೆ ಎಂದು “ಸು ಫ್ರಮ್ ಸೊ” ಸಿನಿಮಾ ಖ್ಯಾತಿಯ ಜೆ.ಪಿ ತೂಮಿನಾಡು ಹೇಳಿದರು.
ವಿಶ್ವಜ್ಯೋತಿ ಯುವಕ ಸಂಘ ಮತ್ತು ಮಾತೃ ಮಂಡಳಿ (ರಿ) ವಳವೂರು ತುಂಬೆ ಇದರ ನೂತನ ಕಟ್ಟಡದ ಉದ್ಘಾಟನೆಯ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಜ್ಯೋತಿಷಿ ಅನಿಲ್ ಕೆ ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯ ಯುವಕರು ಎಲ್ಲರೂ ಒಟ್ಟಾಗಿ ಸೇರಿ ಹಗಲಿರುಳು ಶ್ರಮಪಟ್ಡು ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು ,ವಕೀಲರಾದ ರಮೇಶ್ ಉಪಾಧ್ಯಯ,ತಾ ಪಂ ಮಾಜಿ ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ತರಕೆರೆ,ಸಾಮಾಜಿಕ ಕಾರ್ಯಕರ್ತ ಗೋಪಾಲ ಕುಲಾಲ್ ಗೋವಿಂತೋಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರಿಯದರ್ಶಿನಿ ಸುನಿಲ್ ದಾರಿಬಾಗಿಲು,ಗಣೇಶ್ ಸುವರ್ಣ ತುಂಬೆ,ಗೌರವ ಸಲಹೆಗಾರರಾದ ಸುಂದರ್ ಪೂಜಾರಿ ವಳವೂರು,ಸಂಜೀವ ಪೂಜಾರಿ ವಳವೂರು, ಸಂಘದ ಅಧ್ಯಕ್ಷ ಪೂವಪ್ಪ ವಳವೂರು,ಮಾತೃ ಮಂಡಳಿಯ ಅಧ್ಯಕ್ಷೆ ರಂಜಿನಿ ಉಮನಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿಹಿರಿಯರಾದ ಸುಂದರ ಪೂಜಾರಿ ವಳವೂರು,ಸಂಜೀವ ಪೂಜಾರಿ ವಳವೂರು, ಪೂವಪ್ಪ ವಳವೂರು,ಕೌಶಿಕ್ ವಳವೂರು ಅವರನ್ನು ಸನ್ಮಾನಿಸಲಾಯಿತು,ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು.ಅಕ್ಬರ್ ಅಲಿ ಸನ್ಮಾನಿತರ ಪಟ್ಟಿ ವಾಚಿಸಿದರು
ಪ್ರದೀಪ್ ಬ್ರಹ್ಮರಕೊಟ್ಲು ವರದಿ ವಾಚಿಸಿ, ಭರತ್ ಉಮನಗುಡ್ಡೆ ವಂದಿಸಿದರು, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಸಂಘದ ನೂತನ ಕಟ್ಟಡವನ್ನು ಗುರುಪ್ರಸಾದ್ ಭಂಡಾರಿ ವಳವೂರುಗುತ್ತು ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಂಘದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಳಿಕ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರ ಅಭಿನಯದ “ಜೈ ಭಜರಂಗ ಬಲಿ” ನಾಟಕ ಪ್ರದರ್ಶನಗೊಂಡಿತು
