ಬಂಟ್ವಾಳ : ತಾಲೂಕಿನ ಉಳಿಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ನಡೆದ ೧೩ ನೇ ವರ್ಷದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ರವಿವಾರ ಮಧ್ಯಾಹ್ನ ಸಂಪನ್ನಗೊಂಡಿತು.
ಶನಿವಾರ ಸಂಜೆ ನಡೆದ ಸಮಾರೋಪದಲ್ಲಿ ಸಂಸದ ಕ್ಯಾ. ಬೃಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉದ್ಯಮಿ ಸಂದೇಶ್ ಶೆಟ್ಟಿ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಕೆ, ಬಿಜೆಪಿ ಮುಖಂಡ ಕಿರಣ್ ಪುಷ್ಪಗಿರಿ, ಪ್ರಮುಖರಾದ ಕಿರಣ್ ಮಂಜಿಲ, ಜಯಪ್ರಕಾಶ್ ಜೆ.ಎಸ್., ಭುವನೇಶ್ ಪಚ್ಚಿನಡ್ಕ, ರವೀಂದ್ರ ಕಂಬಳಿ, ಪ್ರಮೋದ್ ಕುಮಾರ್ ರೈ,ಪ್ರಭಾಕರ ಪ್ರಭು ಸಿದ್ದಕಟ್ಟೆ , ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ, ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕಂಬಳ ತೀರ್ಪುಗಾರ ಸುದರ್ಶನ್ ನಾಯ್ಕ ಕಂಪ ಅವರನ್ನು ಸಮ್ಮಾನಿಸಲಾಯಿತು.
ಕೂಟದಲ್ಲಿ ಒಟ್ಟು ೧೧೭ ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ನಾಲ್ಕು ಜತೆ, ಅಡ್ಡಹಲಗೆ ವಿಭಾಗದಲ್ಲಿ ನಾಲ್ಕು ಜತೆ, ಹಗ್ಗ ಹಿರಿಯ ವಿಭಾಗದಲ್ಲಿ ೧೧ ಜತೆ, ನೇಗಿಲು ಹಿರಿಯ ವಿಭಾಗದಲ್ಲಿ ೨೭ ಜತೆ, ಹಗ್ಗ ಕಿರಿಯ ವಿಭಾಗದಲ್ಲಿ ೨೦ ಜತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ೫೧ ಜತೆ ಕೋಣಗಳು ಸ್ಪರ್ಧೆ ಮಾಡಿದ್ದವು.
ಕಂಬಳ ಕೂಟದ ಫಲಿತಾಂಶ
ಕನಹಲಗೆ: ಪ್ರಥಮ: ರಾಯಿ ಶೀತಲ ರೂಪಾ ರಾಜೇಶ್ ಶೆಟ್ಟಿ, ದ್ವಿತೀಯ: ಪಾತಿಲ ಹೊಸಮನೆ ರವಿರಾಜ ಶೆಟ್ಟಿ, ತೃತೀಯ: ವಿಟ್ಲ ಪಂಚಲಿಂಗೇಶ್ವರ ಬಸವನಗುಡಿ ಕುಸುಮ ಪದ್ಮನಾಭ, ಚತುರ್ಥ: ನಿಡ್ಡೋಡಿ ಕಾನ ರಾಮ ಸುವರ್ಣ
ಅಡ್ಡ ಹಲಗೆ: ಪ್ರಥಮ: ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈಬೋಳಿಯಾರ್ ,
ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ. ದ್ವಿತೀಯ:ನಾರಾವಿ ಯುವರಾಜ ಜೈನ್,ಹ.ಮೆ:ಭಟ್ಕಳ ಹರೀಶ್, ಹಗ್ಗ ಹಿರಿಯ: ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ , ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ. ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ , ಓಡಿಸಿದವರು: ಕಾವೂರುದೋಟ ಸುದರ್ಶನ್
ಹಗ್ಗ ಕಿರಿಯ: ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ.ಶೆಟ್ಟಿ ಎ. ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ.ದ್ವಿತೀಯ: ಎರ್ಮಾಳ್ ಡಾ| ಚಿಂತನ್ ರೋಹಿತ್ ಹೆಗ್ಡೆ, ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ.

ನೇಗಿಲು ಹಿರಿಯ: ಪ್ರಥಮ: ಮಹಮ್ಮಾಯಿ ಕಲ್ಲೇರಿ ಪಂಜಿಕುಡೇಲುಗುತ್ತು ನಾರಾಯಣ ಪೂಜಾರಿ.ಓಡಿಸಿದವರು: ಕುಂದು ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್. ದ್ವಿತೀಯ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ, ಓಡಿಸಿದವರು: ಬಂದೂರು ಮಂಜುನಾಥ ಗೌಡ, ನೇಗಿಲು ಕಿರಿಯ: ಪ್ರಥಮ:ಬೊಳ್ಳೂರು ಮಠ ಸದಾಶಿವ ಬಾಬು ಶೆಟ್ಟಿ.ಓಡಿಸಿದವರು: ಹೊಕ್ಕಾಡಿಗೋಳಿ ಕೀರ್ತೇಶ್. ದ್ವಿತೀಯ: ತೆಳ್ಳಾರು ಅರಂತೊಟ್ಟುಗುತ್ತು ತನಿಷ್ಕ್ ಸದಾಶಿವ ಶೆಟ್ಟಿ.ಓಡಿಸಿದವರು: ಕೊರಿಂಜೆ ಅರುಣ್.
