ಕಲ್ಲಡ್ಕ: ಮಕ್ಕಳ ಶಿಸ್ತು ಮತ್ತು ಮೌಲ್ಯಯುತ ಜೀವನಕ್ಕೆ ಸರಕಾರಿ ಶಾಲೆಗಳು ಮೂಲ ಅಡಿಪಾಯವಾಗಿದೆ.ದಾನಿಗಳು ಸಂಘ-ಸಂಸ್ಥೆಗಳು ಮಾಡುವ ಸಹಕಾರ ಸರಕಾರಿ ಶಾಲಾ ಮಕ್ಕಳ ಜೀವನಕ್ಕೆ ಕೊಡುವ ಆಸರೆಯಾಗಿದೆ ಎಂದು ಚಲನಚಿತ್ರ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಾಳು ಧನರಾಜ್ ಆಚಾರ್ಯ ಹೇಳಿದರು.
  ಶನಿವಾರ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶೇರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಅವರು  ಮಾತನಾಡಿದರು.ಬೆಳಗ್ಗೆ ಶಾಲಾ ಧ್ವಜಾರೋಹಣ ಕಾರ್ಯಕ್ರಮವನ್ನು  ಶಾಲಾ  ಶಿಕ್ಷಕಿ ಜಯಲಕ್ಷ್ಮಿ ಪಿ. ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಣಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಲಾದ ಮೇಲ್ಚಾವಣಿ ಶೀಟನ್ನು  ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ರೈ ರವರು  ಉದ್ಘಾಟಿಸಿದರು.
ಸಂಜೆ  ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷ  ಭಾರತಿ ಸುರೇಂದ್ರ ರಾವ್ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು. ಇದೇ ವೇಳೆ ನಿವೃತ್ತಿ ಹೊಂದಲಿರುವ ಶಿಕ್ಷಕರು  ಕೆ. ಗೋಪಾಲಗೌಡ  ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಜಯಲಕ್ಷ್ಮಿ ಪಿ. ರವರನ್ನು ಗೌರವಿಸಲಾಯಿತು.

ಕಲಿಕೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ  ಹಾಗೂ ಮಕ್ಕಳ ಪೋಷಕರಿಗೆ ಆಯೋಜಿಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು  ವಿತರಿಸಲಾಯಿತು. ಕಲಿಕೆಯಲ್ಲಿ ವಿಶೇಷ ಮಕ್ಕಳನ್ನು ಗುರುತಿಸಿ ದಾನಿಗಳು ನೀಡಿದ  ಸಹಾಯಧನ ವಿತರಿಸಲಾಯಿತು.
ಶಾಲೆಗೆ ಈ ಸಾಲಿನಲ್ಲಿ ಕೊಡುಗೆಗಳನ್ನು ನೀಡಿದ ಮಹನೀಯರಿಗೆ ಸ್ಮರಣೆಕೆ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ  ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕನ್ನೊಟ್ಟು, ಪಂಚಾಯತ್ ಸದಸ್ಯರಾದ ಸುರೇಶ್ ಬನಾರಿ,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ರೈ,ಐಡಿಯಲ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಗಂಗಾಧರ ಶೇರಾ, ಹಿರಿಯ ವಿದ್ಯಾರ್ಥಿ  ಸಂಶುದ್ದೀನ್ ಪಟ್ಲ,ಮಾಜಿ ಎಸ್‌.ಡಿ.ಎಂ.ಸಿ. ಅಧ್ಯಕ್ಷರು  ಚೆನ್ನಪ್ಪ ಎಸ್ ಅಂಚನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷೆ ಉಷಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿದಾನಂದ ಮೊದಲಾದವರು ಉಪಸ್ಥಿತರಿದ್ದರು.ಬಳಿಕ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ  ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ  ಅನಿತಾ ಕುಮಾರಿ ಸ್ವಾಗತಿಸಿ, ಹಿರಿಯ ಶಿಕ್ಷಕ  ಕೆ ಗೋಪಾಲಗೌಡ ವಂದಿಸಿದರು.ಸಹ ಶಿಕ್ಷಕಿ  ಜೋಸ್ನಾ ಪ್ರಿಯಾ ವಾಸ್ ಕಾರ್ಯಕ್ರಮ ನಿರೂಪಿಸಿದರು.ಗೌರವ ಶಿಕ್ಷಕಿಯರಾದ ಸುಮಲತಾ, ಸುರಕ್ಷಾ ಮತ್ತು ಅಭಿಜ್ಞಾ ಇವರು ಸಹಕರಿಸಿದರು. 

By suddi9

Leave a Reply

Your email address will not be published. Required fields are marked *