ಬಂಟ್ವಾಳ: ಸಮಾಜದಲ್ಲಿ ಯುವಜನತೆ ಸಂಘಟಿತರಾಗಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ದೇವರ ಕೃಪೆಯ ಜೊತೆಗೆ ಜನರ ಪ್ರೀತಿಯೂ ಲಭಿಸುತ್ತದೆ ಎಂದು ಮಾವಂತೂರು ಬಲವಂಡಿ ಕ್ಷೇತ್ರದ ಗಡಿ ಪ್ರಧಾನ ಎಂ. ದುರ್ಗಾದಾಸ್ ಶೆಟ್ಟಿ ಹೇಳಿದ್ದಾರೆ.
ಬಂಟ್ವಾಳ ತಾ.ನ ರಾಯಿ ನಮ್ಮ ಜವನೆರ್  ಸೇವಾ ಟ್ರಸ್ಟ್ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೊರೆಟ್ಟೋ ಹಿಲ್ಸ್ ಮತ್ತು ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್, ಸಿದ್ದಕಟ್ಟೆ ರಾಯಿ ಲಯನ್ಸ್ ಕ್ಲಬ್, ಸಿದ್ದಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘ, ಮಹಾಲಿಂಗೇಶ್ವರ ಯುವಕ ಸಂಘ, ಭಜನಾ ಮಂಡಳಿ, ಹಾಲು ಉತ್ಪಾದಕರ ಸಹಕಾರಿ ಸಂಘ,ಗಾಮ ಪಂಚಾಯತ್, ಕೈತ್ರೋಡಿ  ಫ್ರೆಂಡ್ಸ್, ಹಳೆ ವಿದ್ಯಾರ್ಥಿ ಸಂಘ ಮತ್ತಿತರ ಸಂಘ ಸಂಸ್ಥೆ ಗಳು ಸಹಭಾಗಿತ್ವ ವಹಿಸಿದ್ದರು.

ಲೊರೆಟ್ಟೋ ಹಿಲ್ಸ್  ರೋಟರಿ ಕ್ಲಬ್ಬಿನ ಅಧ್ಯಕ್ಷವಿಜಯ ಫೆರ್ನಾಂಡಿಸ್, ತಾ. ಪಂ. ಮಾಜಿ ಸದಸ್ಯ ವಸಂತ ಕುಮಾರ್ ಶೆಟ್ಟಿ ಅಣ್ಣಳಿಕೆ,  ನಿವೃತ್ತ ಶಿಕ್ಷಕ ಕೆ. ರಮೇಶ್ ನಾಯಕ್ ರಾಯಿ,  ಸಿದ್ದಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಧ್ಯಕ್ಷ ಪ್ರಭಾಕರ ಪ್ರಭು, ಸಿದ್ದಕಟ್ಟೆ ಮೂರ್ತೆದಾರ ಸೊಸೈಟಿ ಅಧ್ಯಕ್ಷ ಜಗದೀಶ್ ಕೊಯಿಲ  ಶುಭ ಹಾರೈಸಿದರು.
ಪಿ ಡಿ ಒ  ಧರ್ಮರಾಜ್ ದಡ್ಡು,  ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಪ್ರಮುಖರಾದ ಸಂತೋಷ್ ಕುಮಾರ್ ಚೌಟ,  ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ,  ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ,
ಶ್ರೀದೀಪ್ ಶೆಟ್ಟಿ ರಾಯಿ, ದಿನೇಶ್  ಶೆಟ್ಟಿ ಮಡಂದೂರು, ಮೋಹನ್ ಕೆ. ಶ್ರೀಯಾನ್ ರಾಯಿ, ವಿನೋದ್ ರಾಜ್ ಕೈತ್ರೋಡಿ, ಸದಾನಂದ ಗೌಡ ಮತ್ತಾವು,  ಡಾ. ರೇಷ್ಮಾ, ಡಾ. ಶ್ರೀಪ್ರಿಯಾ, ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಶಿವನಗರ, ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಗೌಡ ಮತ್ತಿತರರು ಇದ್ದರು.ಇದೇ ವೇಳೆ ಅಂಚೆ ಇಲಾಖೆ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಕೆ. ಎಸ್., ಜೀವ ವಿಮೆ ಬಗ್ಗೆ ಮಾಹಿತಿ ನೀಡಿದರು.ಟ್ರಸ್ಟ್ ಕಾರ್ಯದರ್ಶಿ ಸಮಿತ್ ರಾಯಿ ಸ್ವಾಗತಿಸಿ,
ಸಾತ್ವಿಕ್ ಗೌಡ ಪ್ರಾರ್ಥಿಸಿದರು. ದಿನೇಶ್ ಸುವರ್ಣ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *