Published On: Sat, Nov 29th, 2025

ಕಕ್ಯಪದವು: ಕಂಬಳ ಓಟಗಾರನಿಗೆ ಸನ್ಮಾನ

ಬಂಟ್ವಾಳ:ಗ್ರಾಮೀಣ ಪ್ರದೇಶದಲ್ಲಿ ಕಂಬಳ ಕೂಟ ಆಯೋಜನೆ ಜೊತೆಗೆ ಕಂಬಳ ಕ್ಷೇತ್ರದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಮಹತ್ಕಾರ್ಯ ಶ್ಲಾಘನೀಯ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಇಲ್ಲಿನ ಕಕ್ಯಪದವು ಮೈರ ಎಂಬಲ್ಲಿ ಶನಿವಾರ ನಡೆದ ‘ಸತ್ಯ-ಧರ್ಮ’ ಜೋಡುಕರೆ ಕಂಬಳದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಸತೀಶ್ ದೇವಾಡಿಗ ಅಳದಂಗಡಿ ಇವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಶುಭ ಹಾರೈಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಬಿಜೆಪಿ ಮುಖಂಡ ರಾಮದಾಸ್‌ ಬಂಟ್ವಾಳ, ಪ್ರಮುಖರಾದ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಪ್ರಕಾಶ್ ಅಂಚನ್, ಗಣೇಶ್ ರೈ ಮಾಣಿ, ಸುಕೇಶ್ ಚೌಟ, ಸಚಿನ್ ಅಡಪ, ನಂದರಾಮ ರೈ, ಪುರುಷೋತ್ತಮ ಶೆಟ್ಟಿ, ಸತೀಶ್ ಪೂಜಾರಿ ಪಾನೇಲ, ಜಿಲ್ಲಾ ತೀರ್ಪೂ ಗಾರ ಎಡ್ತೂರು ರಾಜೀವ್ ಶೆಟ್ಟಿ, ವಕೀಲ ರಂಜಿತ್ ಮೈರ, ಸುರೇಶ ಮೈರ ಮತ್ತಿತರರು ಇದ್ದರು. ಶಿವಾನಂದ ಮೈರ ಸ್ವಾಗತಿಸಿ ವಂದಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter