Published On: Thu, Nov 27th, 2025

ಕಲ್ಲಡ್ಕ ಶ್ರೀರಾಮದಲ್ಲಿ‌ ಸಪ್ತಶಕ್ತಿ ಸಂಗಮ

ಬಂಟ್ವಾಳ: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನದ ಅಶ್ರಯದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ೫ನೇ ೩ನೇ ಮತ್ತು ೪ನೇ  ತರಗತಿಯ ವಿದ್ಯಾರ್ಥಿಗಳ ಮಾತೆಯರಿಗಾಗಿ  ಸಪ್ತಶಕ್ತಿ ಸಂಗಮ ಕಾರ್ಯಕ್ರಮಎರಡು ಹಂತಗಳಲ್ಲಿ ನಡೆಯಿತು.

  ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ್ಯದ ಮಾರ್ಗದರ್ಶಕ ಮಂಡಳಿಯ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿ, “ತಾಯಿಯಾದವಳು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು, ಸಪ್ತಶಕ್ತಿಯ ಗುಣಗಳನ್ನು ಅರಿತುಕೊಂಡು ತಮ್ಮ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು. 

ಅತಿಥಿಯಾಗಿದ್ದ ಶ್ರೀರಾಮ ಶಿಶುಮಂದಿರ ವ್ಯವಸ್ಥಾಪಕರಾದ ಸುಧಾ ಸೂರ್ಯನಾರಾಯಣ ಭಟ್ ಕಶೆಕೋಡಿ ಅವರು ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಶ್ರೀರಾಮ ಶಿಶುಮಂದಿರ ಆಡಳಿತ ಮಂಡಳಿ ಸದಸ್ಯೆ ಶುಭಲಕ್ಷ್ಮೀ ಶಿವಗಿರಿ ಇವರು ಕುಟುಂಬದ ಅರಿವು ಮತ್ತು ಪರಿಸರದ ಬಗ್ಗೆ ಭಾರತೀಯ ದೃಷ್ಟಿಕೋನ ಎಂಬ ವಿಷಯದ ಕುರಿತು ಮಾತನಾಡಿದರು.ಮೊದಲನೇ ಹಂತದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆ ಮಧುರ ಕಡ್ಯ ಹಾಗೂ ಎರಡನೇ ಹಂತದಲ್ಲಿ ಶಿಶುಮಂದಿರದ ಪ್ರಮುಖರಾದ ಶಾಂತಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಇದಕ್ಕು ಮೊದಲು ಮಾತೆಯರನ್ನು ಅರಶಿನ ಕುಂಕುಮ ನೀಡಿ ಆರತಿ ಬೆಳಗಿಸಿ ಬರಮಾಡಿಕೊಳ್ಳಲಾಯಿತು.  ಭಾರತಮಾತೆಗೆ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆ ಮಾಡಿ ಅಗ್ನಿಹೋತ್ರದೊಂದಿಗೆ ಸರಸ್ವತಿ ವಂದನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

ವಿದ್ಯಾರ್ಥಿಗಳು ವಿವಿಧ ಧೀರ ನಾರಿಯರಾದ  ಒನಕೆ ಓಬವ್ವ, ಸಂತ ಮೀರಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಾವಿತ್ರಿಬಾಯಿ ಫುಲೆ, ಅಕ್ಕಮಹಾದೇವಿ, ಅಹಲ್ಯಾಬಾಯಿ ಹೋಳ್ಕರ್, ಹಾಗೂ ಸಾಲುಮರದ ತಿಮ್ಮಕ್ಕರವರ ವೇಷಭೂಷಣಗಳ ಜೊತೆಗೆ ಸಂದೇಶಗಳನ್ನು ನುಡಿದರು. 

ನಂತರ ಮಾತೆಯರಿಗೆ ನಾಲ್ಕು ತಂಡಗಳನ್ನು ರಚಿಸಿ ರಸಪ್ರಶ್ನೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಮಲ್ಲಿಕಾ.ಆರ್.ಶೆಟ್ಟಿ, ಮಾತೃಭಾರತಿ ಸದಸ್ಯರು ಶ್ರೀಲಕ್ಷ್ಮೀ ಭಟ್, ವಿಜಯಲಕ್ಷ್ಮೀ ಮಯ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಮಾತೆಯರಾದ  ಶಶಿಪ್ರಭಾ, ಧರಣಮ್ಮ ತಿಮ್ಮಪ್ಪ ಪೂಜಾರಿ, ಸಾವಿತ್ರಿ ವಸಂತ ಮಾಧವ ಹಾಗೂ ಅಂಬುಜಾಕ್ಷಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ  ಸಪ್ತಶಕ್ತಿಗಳನ್ನು ಜಾಗೃತಗೊಳಿಸಲು ಮಾತೆಯರು ಸಂಕಲ್ಪ ಮಾಡಿದರು. ೨೬೦ ಮಾತೆಯರು ಪಾಲ್ಗೊಂಡಿದ್ದರು.

 ಅಧ್ಯಾಪಕರಾದ  ಪ್ರೀತಾ ಹಾಗೂ ರೂಪಕಲಾ ಎಂ ಸ್ವಾಗತಿಸಿದರು,  ಅನ್ನಪೂರ್ಣ ಎನ್ ಭಟ್ ಹಾಗೂ ಹೇಮಲತಾ ಕಾರ್ಯಕ್ರಮನಿರೂಪಿಸಿ,  ಕುಸುಮಾ ಹಾಗೂ ಬಬಿತ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter