ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಬಂಧಿತ ಇಲಾಖೆಗಳು ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಂಯುಕ್ತಾಶ್ರಯದಲ್ಲಿ “ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಮಕ್ಕಳ ಮಾಸ”  ೨೦೨೫ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಟ್ಟದ ರಕ್ಷಣಾ ಘಟಕ ಸಾಂಸ್ಥಿಕ‌ ರಕ್ಷಣಾಧಿಕಾರಿ ಕುಮಾರ ಶೆಟ್ಟಿಗಾರ್  ಅವರು ಮಕ್ಕಳ ರಕ್ಷಣೆ ,ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಸಹಾಯವಾಣಿಗಳ  ಮಾಹಿತಿಯನ್ನು ನೀಡಿದರು.  ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಮಾಜಿಕ  ಕಾರ್ಯಕರ್ತರಾದ ಜಿತೇಶ ಜಿ., ದ.ಕ.ಜಿಲ್ಲೆ ಮಕ್ಕಳ ಸಹಾಯವಾಣಿ ಸಂಯೋಜಕ ಗಣೇಶ್ ಪಿ.,ಮಕ್ಕಳ ಸಹಾಯವಾಣಿ ಆಪ್ತ ಸಮಾಲೋಚಕರಾದ ರೇವತಿ ಬಿ.ಅವರು ಉಪಸ್ಥಿತರಿದ್ದರು. ಶ್ರೀರಾಮ ಪ್ರೌಢಶಾಲಾ ಹಾಗೂ ಪದವಿಪೂರ್ವ ವಿಭಾಗದ  ಉಪನ್ಯಾಸಕರು      ಕಾರ್ಯಾಗಾರದಲ್ಲಿ‌ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *