Published On: Tue, Nov 11th, 2025

ಗುರುಗಳು ಜೀವನದ ನಿಜವಾದ ಮಾರ್ಗದರ್ಶಕರು : ಡಾ.ತ್ರಿವೇಣಿ,,ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದಿಂದ ಗುರುವಂದನಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಬಂಟ್ವಾಳ : ಗುರುಗಳು ಸಮಾಜದ ದೀಪಗಳು ಅವರಿಂದಲೇ ಜ್ಞಾನ, ಸಂಸ್ಕಾರ ಮತ್ತು ಮೌಲ್ಯಗಳ ಬೆಳಕು ಹರಡುತ್ತದೆ.ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅತಿ ಮಹತ್ತರವಾಗಿದ್ದು,ಗುರುಗಳು ಕೇವಲ ಪಾಠ ಬೋಧಕರು ಮಾತ್ರವಲ್ಲ, ಜೀವನದ ನಿಜವಾದ ಮಾರ್ಗದರ್ಶಕರು ಎಂದು ಮಂಗಳೂರಿನ ಡಯಟ್ ಸೆಂಟರ್‌ನ ಹಿರಿಯ ಉಪನ್ಯಾಸಕರಾದಡಾ. ತ್ರಿವೇಣಿ  ಹೇಳಿದ್ದಾರೆ.


ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ  ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ನಡೆದ “ಗುರುವಂದನಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಗುರುಗಳ ಸಲಹೆಗಳನ್ನು ಮನಸ್ಸಿನಲ್ಲಿರಿಸಿಕೊಂಡು ಜೀವನದಲ್ಲಿ ಮುಂದುವರಿಯಬೇಕು.
ಶಿಕ್ಷಣದ ಅರ್ಥ ಅಂಕಗಳಲ್ಲ, ಅದು ಮಾನವೀಯತೆಯ ಬೆಳವಣಿಯ ರಹದಾರಿಯಾಗಿದೆ ಎಂದು ಅವರು‌ಹೇಳಿದರು.
ಇದೇ ವೇಳೆ ಬಂಟ್ವಾಳ ತಾಲೂಕಿನ ಬಿಲ್ಲವ ಸಮುದಾಯದ ಸರಕಾರಿ ಹಾಗೂ ಸರಕಾರೇತರ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ವಿಭಾಗದ ಒಟ್ಟು 195 ಬೋಧಕ-ಬೋಧಕಿಯರಿಗೆ “ಬಿಲ್ಲವ ಗುರುವಂದನಾ ಗೌರವಾಭಿನಂದನೆ” ಹಾಗೂ ಜಿಲ್ಲಾ, ರಾಜ್ಯ ರಾಷ್ಟ್ರ ಮಟ್ಟದ ಸಾಧಕ 10 ಗುರುಗಳಿಗೆ ” ಬಿಲ್ಲವ ಗುರುವಂದನಾ ಪುರಸ್ಕಾರ ” ಪ್ರದಾನ ಮಾಡಲಾಯಿತಲ್ಲದೆ ಸುಮಾರು 100 ಮಂದಿ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆಒಟ್ಟು  ಐದು ಲಕ್ಷ ರೂ.ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಬಿಆರ್ ಇಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ್ ಸಾಲ್ಯಾನ್, ಖ್ಯಾತ ವೈದ್ಯರಾದ
ಡಾ. ಸದಾನಂದ ಪೂಜಾರಿ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ ಪೂಜಾರಿ, ಉದ್ಯಮಿ ಓಂಪ್ರಸಾದ್ ಬಾರ್ದಿಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್‌ ಪಚ್ಚಿನಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು


2026 ರ ಜನವರಿ 25ರಂದು ನಡೆಯುವ “ಕೋಟಿ -ಚೆನ್ನಯ” ಕ್ರೀಡೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು, ಕ್ರೀಡಾಕೂಟದ ಸಂಚಾಲಕರಾದ ಬೇಬಿ ಕುಂದರ್,ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಕೋಶಾಧಿಕಾರಿ ಸುನೀಲ್ ಎನ್  ಕುಂದರ್, ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ಶಂಬೂರು, ಆಂತರಿಕ ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್, ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ ಎಸ್ ಸ್ವಾಗತಿಸಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು 


 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter