Published On: Tue, Nov 11th, 2025

ಶ್ರೀರಾಮ ಪದವಿ ಕಾಲೇಜಿನಲ್ಲಿ – ಕನಕದಾಸ ಜಯಂತಿ ಆಚರಣೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. 

 ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ರಮೇಶ್ ಶ್ರೀಮಾನ್, ಶ್ರೀರಾಮ ಶಿಶುಮಂದಿರದ ಪ್ರಮುಖರಾದ ಶಾಂತಲಕ್ಷ್ಮಿ ಮಾತಾಜಿ ಭಾಗವಹಿಸಿದ್ದರು. 

ಅತಿಥಿಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,  ಕನಕದಾಸರ ದಾಸ ಸಾಹಿತ್ಯಕ್ಕೆ  ನೀಡಿದ ಕೊಡುಗೆಯನ್ನು ಸ್ಮರಿಸಿದರು.ಕನಕದಾಸ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕನಕ ಕೀರ್ತನ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ತದನಂತರ ಕನಕದಾಸರ ಜೀವನ ವೃತ್ತಾಂತದ ಬಗೆಗಿನ ಕಿರುಚಿತ್ರ ಪ್ರದರ್ಶಿಸಲಾಯಿತು.

ಅದೇರೀತಿ ವಿದ್ಯಾರ್ಥಿಗಳಿಗೆ ಕನಕನ ನೆನಪು ವಿಷಯದಡಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.  ಉಪಪ್ರಾಂಶುಪಾಲರಾದ ಯತಿರಾಜ್ ಪಿ., ಕನ್ನಡ ಉಪನ್ಯಾಸಕಿ ಅನನ್ಯ ಉಪಸ್ಥಿತರಿದ್ದರು.  ವಿದ್ಯಾರ್ಥಿನಿ ಅಶ್ವಿನಿ ಸ್ವಾಗತಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter