Published On: Tue, Nov 11th, 2025

ಕಾರ್ಯಾಗಾರಗಳು  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪೂರಕ: ಪದ್ಮನಾಭ ಕೊಟ್ಟಾರಿ‌

ಬಂಟ್ವಾಳ: ತರಬೇತಿ,ಕಾರ್ಯಾಗಾರಗಳ  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪೂರಕವಾಗಲಿದೆ.ಇದರಿಂದ ಪಡೆದ ಅನುಭವ  ಜನರ ಜೊತೆ ವ್ಯವಹರಿಸುವ ಸಾಮರ್ಥ್ಯವನ್ನು ಉತ್ತಮವಾಗಿಸುತ್ತದೆ‌ ಎಂದು‌ ಮಾಜಿ ಶಾಸಕ‌, ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಹೇಳಿದ್ದಾರೆ.


ಶನಿವಾರ ಕಲ್ಲಡ್ಕದ ಕಾವೇರಿ ಸಂಕೀರ್ಣದಲ್ಲಿ   ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿ.ಕಲ್ಲಡ್ಕ ಹಾಗೂ ಮಾಸ್ಟರ್ ಮೈಂಡ್ ಎಂಟರ್ ಪ್ರೈಸಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಂಘದ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು‌.


ಕಾರ್ಯಾಗಾರದಲ್ಲಿ ಪಡೆದ ಅನುಭವ ಬ್ಯಾಂಕ್ ಗೆ ಬರುವಂತ ಗ್ರಾಹಕರು,ಸದಸ್ಯರು, ಆಡಳಿತ ಮಂಡಳಿಯ ಜೊತೆ ಉತ್ತಮ ಬಾಂಧವ್ಯವನ್ನು ರೂಡಿಸಿಕೊಂಡು ಬ್ಯಾಂಕ್ ನ ಅಭಿವೃದ್ಧಿಗೆ ಸಹಕಾರವಾಗಲಿ ಎಂದು ಅವರು ಹೇಳಿದರು.
  ಸಂಘದ ಉಪಾಧ್ಯಕ್ಷ ಲೋಕಾನಂದ ಏಳ್ತಿಮಾರ್, ನಿರ್ದೇಶಕರುಗಳಾದ ಚಂದ್ರಶೇಖರ ಟೈಲರ್, ಮಹಾಬಲ ಸಾಲ್ಯಾನ್,ಸುರೇಶ್ ಶೆಟ್ಟಿ ಕಾಂದಿಲ, ಕೊರಗಪ್ಪ ಗೌಡ, ಪ್ರಭಾಕರ್ ಶೆಟ್ಟಿ, ಜಯರಾಮ ರೈ, ಕೊರಗಪ್ಪ ನಾಯ್ಕ, ನೋಣಯ್ಯ ಎಂ.ಆರ್,ವಿಜಯಪ್ರಕಾಶ್ ಹಾಗೂ  ಮಾಸ್ಟರ್ ಮೈಂಡ್ ಎಂಟರ್ ಪ್ರೈಸಸ್ ನ ಶ್ರೀಶ ಕೆ.ಎಮ್, ಭರತ್ ಉಪಸ್ಥಿತರಿದ್ದರು.


ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ  ಹಿನ್ನೆಲೆಯಲ್ಲಿ ಹಾಗೂ  ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸಿ ಈ ಸಂದರ್ಭ” ವಂದೇ ಮಾತರಂ” ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು.
  ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಕೆ.ಸ್ವಾಗತಿಸಿ, ರಾಜೇಶ್ ಕೊಟ್ಟಾರಿ ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter