ಮಾನವೀಯತೆ,ಒಗ್ಗಟ್ಟೇ ನಿಜವಾದ ಪ್ರಗತಿ: ಉಪತಹಶೀಲ್ದಾರ್ ನವೀನ್ ಕುಮಾರ್
ಬಂಟ್ವಾಳ: ನಾರಾಯಣಗುರುಗಳು ಮಾನವ ಸಮಾಜಕ್ಕೆ ಶಾಶ್ವತ ದಾರಿದೀಪವಾದ ತಾತ್ವಿಕ ಮತ್ತು ಸಾಮಾಜಿಕ ಸಂದೇಶಗಳನ್ನು ನೀಡಿದ ಮಹತ್ವದ ಯುಗಪ್ರವರ್ತಕರು.ಇಂದು ಜಗತ್ತು ಸಂಘರ್ಷ, ವಿಭಿನ್ನತೆ ಮತ್ತು ಅಸಹಿಷ್ಣುತೆಯಿಂದ ಕೂಡಿರುವಾಗ, ನಾರಾಯಣಗುರುಗಳ ಈ ಸಂದೇಶಗಳು ಇನ್ನಷ್ಟು ಪ್ರಸ್ತುತ. ಮಾನವೀಯತೆ ಮತ್ತು ಒಗ್ಗಟ್ಟೇ ನಿಜವಾದ ಪ್ರಗತಿ ಎಂಬ ಸಂದೇಶ ಕಾಲಾತೀತ ಎಂದು ಬಂಟ್ವಾಳ ಉಪ ತಹಶಿಲ್ದಾರರಾದ ನವೀನ್ ಕುಮಾರ್ ತಿಳಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ರಾಜೇಶ್ ಅಮ್ಟೂರ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 58ನೇ ಮಾಲಿಕೆ ಹಾಗೂ ತುಳಸಿ ಪೂಜಾ ಕಾರ್ಯಕ್ರಮದಲ್ಲಿ ಅವರು ಗುರುಸಂದೇಶ ನೀಡಿದರು
ಏರ್ಯ ದಾಮೋದರ್ ಮಾಸ್ಟರ್, ಯುವವಾಹಿನಿ ಬಂಟ್ವಾಳ ಘಟಕದ ಉಪಧ್ಯಕ್ಷರಾದ ಕಿರಣ್ ಪೂಂಜರೆಕೋಡಿ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಚಿನ್ನ ಕಲ್ಲಡ್ಕ ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ಸದಸ್ಯರಾದ ಸುನೀತಾ ಮಾರ್ನಬೈಲು ಭವಾನಿ ಅಮೀನ್, ಪ್ರಶಾಂತ್ ಅಮೀನ್ ಏರಮಲೆ, ವಿಘ್ನೇಶ್ ಬೊಳ್ಳಾಯಿ ಯತೀಶ್ ಬೊಳ್ಳಾಯಿ ಅಜಯ್ ಮೊಗರ್ನಾಡ್ ಬ್ರಿಜೇಶ್ ಕುಂಜತ್ತೂರ್ ಜಗದೀಶ್ ಕಲ್ಲಡ್ಕ ಆನಂದ ಪೂಜಾರಿ ಅಜ್ಜಿಬೆಟ್ಟು
ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ, ಅರುಣ್ ಕುಮಾರ್, ರಾಜೇಶ್ ಸುವರ್ಣ ನಾಗೇಶ್ ಪೊನ್ನೋಡಿ, ಹರೀಶ್ ಕೋಟ್ಯಾನ್ ಕುದನೆ, ಮತ್ತಿತರರು ಉಪಸ್ಥಿತರಿದ್ದರು
ಅಮ್ಟೂರು ಹರೇಕೃಷ್ಣ ಭಕ್ತವೃಂದದ ಸರ್ವ ಸದಸ್ಯರು ಸಹಕರಿಸಿದರು



