ಬಿಲ್ಲವ ಸಮಾಜ ಸೇವಾ ಸಂಘ(ರಿ.) ಕಲ್ಲಡ್ಕ ಇದರ ವೀರಕಂಭ ಗ್ರಾಮ ಸಮಿತಿ ಸಭೆ
ಬಂಟ್ವಾಳ : ಬಿಲ್ಲವ ಸಮಾಜ ಸೇವಾ ಸಂಘ(ರಿ.) ಕಲ್ಲಡ್ಕ ಇದರ ವೀರಕಂಭ ಗ್ರಾಮ ಸಮಿತಿ ಸಭೆಯು ವೀರಕಂಭ ಗ್ರಾಮದ ತೆಕ್ಕಿಪಾಪು ಶ್ರೀ ಲಕ್ಷ್ಮಿ ನಿವಾಸ ಮೆನೆ ಆವರಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ವಲಯ ಬಿಲ್ಲವ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ವಹಿಸಿದ್ದರು.ತೆಕ್ಕಿಪಾಪು ಲಕ್ಷ್ಮಿ ನಿವಾಸ ಮನೆ ಮಾಲಕಿ ನಳಿನಾಕ್ಷಿ ಮೋನಪ್ಪ ಪೂಜಾರಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

ಈ ಸಂರ್ಭದಲ್ಲಿ ನಿವೃತ ಸೈನಿಕ ಚಂದ್ರಶೇಖರ ಪೂಜಾರಿ ರವರನ್ನು ಗೌರವಿಸಲಾಯಿತು.ಈ ಸಂದರ್ಭ ವೀರಕಂಭ ಗ್ರಾಮ ಸಮಿತಿಗೆ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತಲ್ಲದೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಕಲ್ಕಡ್ಕ ವಲಯ ಬಿಲ್ಲವ ಸಂಘದ ನೀಯೋಜಿತಾ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ಜತೆ ಕಾರ್ಯದರ್ಶಿ ಮಾದವ ಸುಧೆಕಾರ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಪೂಜಾರಿ ಅಮ್ಟೂರು, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೊಳಿಮಾರ್,,ಮಾಜಿ ಪಂಚಾಯತ್ ಅಧ್ಯಕ್ಷ ಧಿನೇಶ್ ಪೂಜಾರಿ,ದೈವ ಪರಿಚರಕಾರದ ಶೇಕರ ಕಾಣೆಕೋಡಿ, ರಾಮಚಂದ್ರ ಪೂಜಾರಿ ಪಾದೆ, ಕೊರಗಪ್ಪ ಪೂಜಾರಿ ಕೆಪುಳಕೋಡಿ, ಮಾಜಿ ಸೈನಿಕ ಚಂದ್ರಶೇಖರ್ ಪೂಜಾರಿ ಹಾಗೂ ಕಲ್ಲಡ್ಕ ವಲಯ ಬಿಲ್ಲವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೀರಕಂಭ ಗ್ರಾಮಸಮಿತಿ ಅಧ್ಯಕ್ಷ ಜಯಪ್ರಕಾಶ್ ಸ್ವಾಗತಿಸಿ, ರವೀಂದ್ರ ಪಾದೆ ವಂದಿಸಿ,ಚಂದ್ರಶೇಖರ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು



