ಮೋಂತಿಮಾರು ಕ್ಷೇತ್ರದಲ್ಲಿ 1 ಕೋ.ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾನೆ
ಬಂಟ್ವಾಳ : ಇಲ್ಲಿನ ಮಂಚಿ ಗ್ರಾಮದ ಮೋಂತಿಮಾರುಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸುಮಾರು ಒಂದು ಕೋ. ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭೋಜನ ಶಾಲೆ, ದೇವಸ್ಥಾನದ ಸುತ್ತ ಪ್ರಾಕಾರ ರಚನೆ, ಪಾಕಶಾಲೆಯ ನವೀಕರಣ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಯಿತು.

ಸುಳ್ಯ ಕಸ್ತೂರಿ ನರ್ಸರಿ ಓಡಬಾಯಿಮಧುಸೂದನ್ ಕುಂಭಕೋಡು ದಂಪತಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭ ಮೋಂತಿಮಾರು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎಸ್. ಆರ್. ಸತೀಶ್ಚಂದ್ರ,ರಾಜಾರಾಮ್ ಮಂಗಳೂರು,ದೇವಳದ ಸಹ ಮೊಕ್ತೇಸರರು, ಸಮಾಜದ ಹಿರಿಯರು ಮತ್ತು ಮಾತೆಯರು,ಸ್ಥಳೀಯ ಪ್ರಮುಖರು ಹಾಜರಿದ್ದರು.



