ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದನೂತನ ಗರ್ಭಗುಡಿಯ ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಭೆ
ಬಂಟ್ವಾಳ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಭೆಯು ಬುವನೇಶ್ ಪಚಿನಡ್ಕ ಇವರ ಅಧ್ಯಕ್ಷತೆಯಲ್ಲಿ ನ.೨ರಂದು ಭಾನುವಾರ ನಡೆಯಿತು.

ದೆವಸ್ಥಾನಕ್ಕೆ ತಾಮ್ರದ ಕವಚ ಅಳವಡಿಸಲು ಒಂದು ಪೀಟ್ಗೆ ೨.೫೦೦ ರಂತೆ ಪ್ರತಿಯೊಬ್ಬ ಭಕ್ತಾಧಿಗಳು ದೆವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಲು ರಸೀದಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಜೀರ್ಣೋದ್ಧಾರ ಕಾರ್ಯದಲ್ಲಿ ಸಂಪೂರ್ನ ಸಹಕಾರ ನೀಡುವುದಾಗಿ ಹೇಳಿದರು.

ಜೀರ್ಣೋದ್ಧಾರಸಮಿತಿ ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ,ಶ್ರೀ ಆದಿಶಕ್ತಿ ಚಾಮುಂಡೆಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಎಂ, ರಮೇಶ್ ಪೂಜಾರಿ,ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನಾರಾಯಣ್ ನಾಯಕ್, ಉಧ್ಯಮಿ ಉಮೇಶ್ ಸಾಲಿಯಾನ್‌ಬೆಂಜನಪದವು,ಸAದೀಪ್‌ಸದಾಶಿವ ಮತ್ತಿತರರು ಉಪಸ್ಥಿತರಿದ್ದರು. ಶಶಿಕಿರಣ್ ಬೆಳ್ಳೂರು ಸ್ವಾಗತಿಸಿ,ವಂದಿಸಿದರು. ದಿನೇಶ್ ವರಕೋಡಿ ಕಾರ್ಯಕ್ರಮ ನಿರೂಪಿಸಿದರು.




