ಶ್ರೀ ರಾಮ ನಾಮ ತಾರಕ ಜಪ ಯಜ್ಞದ 48 ದಿನಗಳ ಜಪ ಸಂಕಲ್ಪ ದೀಕ್ಷಾ ಕಾರ್ಯಕ್ರಮಕ್ಕೆ ನೆತ್ತರಕೆರೆಯಲ್ಲಿ ಚಾಲನೆ
ಬಂಟ್ವಾಳ:ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿ ನೆತ್ತರಕೆರೆ ಇದರ ಅಶ್ರಯದಲ್ಲಿ ಡಿ.21ರಂದು ತಾಲೂಕಿನ ಕಳ್ಳಿಗೆ-ಪುದು ಗ್ರಾಮದ ನೆತ್ತರಕೆರೆಯಲ್ಲಿ ನಡೆಯಲಿರುವ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಪೂರ್ವಭಾವಿಯಾಗಿ 48 ದಿನಗಳ ಜಪ ಸಂಕಲ್ಪ ದೀಕ್ಷಾ ಕಾರ್ಯಕ್ರಮಕ್ಕೆ ಭಾನುವಾರ ನೆತ್ತರಕೆರೆಯಲ್ಲಿ ಚಾಲನೆ ನೀಡಲಾಯಿತು.

ರಾಜ್ಯ ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ರಾಮನಾಮ ಜಪದ ಯಜ್ಞದ ಸಂಕಲ್ಪ ಹಾಗೂ ದೀಕ್ಷೆಯನ್ನಿತ್ತು ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಚಣಗೈದು, ಸಮಾಜದ ಸ್ವಾಸ್ಥ್ಯ ಕಾಪಾಡಿ ಎಲ್ಲರೊಂದಿಗೆ ಬೆರೆತು ಬದುಕಲು ರಾಮತ್ವ ನಮ್ಮೊಳಗೆ ಪ್ರವೇಶ ವಾಗಬೇಕು, ಅದಕ್ಕಾಗಿ ರಾಮನಾಮದ ಅನುಷ್ಠಾನ ಅಗತ್ಯ, ಶ್ರದ್ದಾ ಭಕ್ತಿಯಿಂದ ರಾಮ ನಾಮ ಸ್ಮರಣೆಯೊಂದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿ ರಾಮ ರಾಜ್ಯದ ಕನಸು ನನಸು ಮಾಡೋಣ ಎಂದು ಹೇಳಿದರು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನಗೈದು,ನಾವೆಲ್ಲರೂ ದೇವರ
ರೂಪವಾಗಿದ್ದು, ನಮ್ಮಲ್ಲಿರುವ ದೈವತ್ವದ ಜಾಗೃತಿ, ಹಿಂದೂ ಸಮಾಜದ ಒಗ್ಗಟ್ಟು, ಉದ್ಧಾರಕ್ಕೆ ರಾಮ ನಾಮ ತಾರಕ ಮಂತ್ರ ಅನಿವಾರ್ಯವಾಗಿದೆ ಎಂದರು
ಗೋವಿನತೋಟ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್ ಮಾತನಾಡಿ,ಭಗವಂತನ ನಾಮ ಸ್ಮರಣೆಗೆ ಅಪಾರವಾದ ಶಕ್ತಿ ಇದೆ, ಎಲ್ಲಾ ಪಾಪ ಪರಿಹಾರಕ್ಕಾಗಿ,ಮೋಕ್ಷ ಸಿದ್ದಿಗಾಗಿ ರಾಮನಾಮ ತಾರಕಮಂತ್ರ ಪೂರಕವಾಗಿದೆ ಎಂದರು.
ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ ಕೊದ್ಮಾಣ್ ಅಧ್ಯಕ್ಷತೆ ವಹಿಸಿದ್ದರು.ವಿಶ್ವನಾಥ ಕುಲಾಲ್ ಪ್ರಾರ್ಥಿಸಿ, ಸಂಯೋಜಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು,ಸಂಘಟಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು, ಇದಕ್ಕು ಮೊದಲು ಸಾಮೂಹಿಕ ಗೋಪೂಜೆ ನಡೆಸಲಾಯಿತು
ಬಳಿಕ ಸುಜೀರು ಶ್ರೀರಾಮ ವೈದ್ಯನಾಥ ಭಜನಾ ಮಂದಿರ, ಪುದು ಗ್ರಾಮದ ನಾಣ್ಯ ನಾಗರಕ್ತೇಶ್ವರಿ ಕ್ಷೇತ್ರ ನಾಣ್ಯ ಪುದು,
ಕುಮ್ಡೇಲು ಕೋರ್ದಬ್ಬು ದೈವಸ್ಥಾನ ಹಾಗೂ
ಪೊಡಿಕ್ಕಳ ಹನುಮಾನ್ ಮಂದಿರ, ಕೊಡ್ಮಾಣ್ ಶ್ರೀರಾಮ ಮಂದಿರದಲ್ಲಿ ತಾರಕ ಮಂತ್ರ ದೀಕ್ಷಾ ಕಾರ್ಯಕ್ರಮ ನಡೆಯಿತು



