ಯೂಥ್ ಫಾರ್ ಸೇವಾ ಸಂಸ್ಥೆ ವತಿಯಿಂದ ಬ್ಯಾಗ್ ಮತ್ತು ಕಲಿಕಾ ಸಾಮಾಗ್ರಿ ವಿತರಣೆ
ಬಂಟ್ವಾಳ: ಯೂಥ್ ಫಾರ್ ಸೇವಾ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಬಂಟ್ವಾಳ ತಾಲೂಕಿನ ಕೊಳಲಬಾಕಿಮಾರು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಾಗ್ರಿ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಸ್ಥಳೀಯರು, ಯೋಧರಾದ ವೆಂಕಪ್ಪಮೂಲ್ಯ ಮತ್ತು ಟೆಕ್ಸಾಸ್ ಸಂಸ್ಥೆಯ ಉದ್ಯೋಗಿ ಎಂ.ವಿ. ಸವಿನಯ ಅವರು ಯೂಥ್ ಫಾರ್ ಸೇವಾ ಸಂಸ್ಥೆಯ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂಸಿ ಅಧ್ಯಕ್ಷೆ ವಿಮಲಾ,ಉಪಾಧ್ಯಕ್ಷ ಮಂಜುನಾಥ , ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧೀಂದ್ರ ಶೆಟ್ಟಿ , ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ರಾಜೇಶ ಕೆ, ಶಿಕ್ಷಕಿ ನಿಕಿತ ಕೆ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅದೇ ರೀತಿ ಎ.ವಿ. ಸವಿನಯ ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.



