ಕಾಡಬೆಟ್ಟು: ‘ಯಕ್ಷವಾಸ್ಯಯಂ’ ಪ್ರಶಸ್ತಿ ಪ್ರದಾನ ಕನ್ನಡ ಭಾಷೆ ಬೆಳವಣಿಗೆಗೆ ಯಕ್ಷಗಾನ ಪೂರಕ: ದಿನೇಶ ಶೆಟ್ಟಿ ಕಾವಳಕಟ್ಟೆ
ಬಂಟ್ವಾಳ: ರಾಜ್ಯದಲ್ಲಿ ಕನ್ನಡ ಭಾಷೆ ಬೆಳವಣಿಗೆಯಲ್ಲಿ ತುಳುನಾಡಿನ ಅರ್ಥಪೂರ್ಣ ಯಕ್ಷಗಾನದ ಕೊಡುಗೆ ಅಪಾರವಾಗಿದೆ ಎಂದು ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ ಹೇಳಿದ್ದಾರೆ.ತಾಲೂಕಿನ ಕಾರಿಂಜ ಯಕ್ಷವಾಸ್ಯಂ ಸಂಸ್ಥೆ ವತಿಯಿಂದ ಕಾಡಬೆಟ್ಟು ಶಾರದಾಂಬ ಭಜನಾ ಮಂದಿರದಲ್ಲಿ ಶನಿವಾರ ನಡೆದ ‘ಯಾಕ್ಷಾವಾಸ್ಯಂ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ಅಗಲಿದ ಹಿರಿಯ ಅರ್ಥಧಾರಿ ಶಂಭು ಶರ್ಮ ಇವರಿಗೆ ನುಡಿನಮನ ಸಲ್ಲಿಸಿದರು.

ಶಾರದಾಂಬ ಭಜನಾ ಮಂದಿರ ಗೌರವಾಧ್ಯಕ್ಷ ಕೆ. ಪ್ರಮೋದ್ ಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೂಳೆ ತಜ್ಞ ಡಾ. ಭಾಸ್ಕರಾನಂದ ಕುಮಾರ್ ಮಾತನಾಡಿ, ‘ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆ- ಮದ್ದಳೆ ಜೊತೆಗೆ ತಾಳ ವಾದನಕ್ಕೆ ಬದಲಾಗಿ ಪಯರ್ಾಯ ವಾದನ ಬಳಕೆ ಸಲ್ಲದು’ ಎಂದರು.
ರಂಗ ನಾಯಕ ಕುರಿಯ ಗಣಪತಿ ಶಾಸ್ತ್ರಿ ಇವರಿಗೆ ‘ಯಾಕ್ಷಾವಾಸ್ಯಂ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಪ್ರತಿಯೊಂದು ಯಕ್ಷಗಾನ ಪ್ರದರ್ಶನಗಳ ಯಶಸ್ವಿಗೆ ಹಿಮ್ಮೇಳ ಮತ್ತು ಮುಮ್ಮೇಳದ ಎಲ್ಲಾ ಕಲಾವಿದರ ಒಗ್ಗೂಡುವಿಕೆಯ ಪ್ರಯತ್ನ ಪ್ರಮುಖ ಕಾರಣ’ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.
ಸಂಘಟಕ ಜನಾರ್ಧನ ಅಮ್ಮುಂಜೆ ಸನ್ಮಾನಿತರನ್ನು ಪರಿಚಯಿಸಿದರು. ಯಕ್ಷಗುರು ಶ್ರೀನಿವಾಸ್ ಬಳ್ಳಮಂಜ ಇವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.ಕಾವಳ ಪಡೂರು ಮತ್ತು ಕಾವಳ ಮೂಡೂರು ಗ್ರಾ. ಪಂ. ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ ಮತ್ತು ಅಜಿತ್ ಶೆಟ್ಟಿ ಕಾರಿಂಜ, ಮುಖ್ಯಶಿಕ್ಷಕ ಸಂತೋಷ್ ಕುಮಾರ್ ವಗ್ಗ, ಭಜನಾ ಮಂದಿರ ಅಧ್ಯಕ್ಷ ಉಮೇಶ್ ಅಜ್ಜಿ ಬಾಕಿಮಾರು, ಉಪನ್ಯಾಸಕಿ ಪೂರ್ಣಿಮಾ, ಯತೀಶ್ ರೈ, ಪ್ರಮುಖರಾದ ಪಿ. ಜಿನರಾಜ ಅರಿಗ, ವೆಂಕಟರಮಣ ಮುಚ್ಚಿನ್ನಾಯ, ರಮೇಶ್ ಶೆಟ್ಟಿ ಮಜಲೋಡಿ, ಜಯರಾಮ್ ಭಟ್ ಮತ್ತಿತರರು ಇದ್ದರು.
ಸಮಿತಿ ಉಪಾಧ್ಯಕ್ಷ ಬಿ. ದೇವದಾಸ್ ಶೆಟ್ಟಿ ಸ್ವಾಗತಿಸಿದರು. ಸಂಚಾಲಕಿ ಸಾಯಿಸುಮಾ ನಾವಡ ವಂದಿಸಿದರು. ವಿದ್ಯಾರ್ಥಿಗಳಾದ ಗಗನಶ್ರೀ, ವಂದನಾ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ‘ಶ್ರೀಕೃಷ್ಣ ಲೀಲೆ’ ಮತ್ತು ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು



