ಗುರುಪುರ ಯುವಕ ಸಂಘದಿಂದ ಹೆದ್ದಾರಿ ಬದಿಯ ಗಿಡಗಂಟಿ ತೆರವು
ಗುರುಪುರ : ಯುವಕ ಸಂಘ(ರಿ) ಗುರುಪುರ ಇದರ ಅಧ್ಯಕ್ಷ ನಿಕಿಲ್‌ರಾಜ್ ಗುರುಪುರ ಅವರ ಮುಂದಾಳತ್ವದಲ್ಲಿ ಸಂಘದ ಸದಸ್ಯರು ರಾಷ್ಟ್ರೀಯ ಹೆದ್ದಾರಿ ೧೬೯ರ ಅಲೈಗುಡ್ಡೆಯ ಬಳಿ ಹೆದ್ದಾರಿ ಇಕ್ಕೆಲದಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿದರು.

ಮಳೆಗಾಲದ ಬಳಿಕ ಗುರುಪುರ ಆಸುಪಾಸಿನಲ್ಲಿ ರಸ್ತೆ ಬದಿಯಲ್ಲಿ ಆಳೆತ್ತರ ಗಿಡಗಂಟಿ ಪೊದೆಯಂತೆ ಬೆಳೆದಿದ್ದು, ಹೆದ್ದಾರಿ ತಿರುವುಗಳಲ್ಲಿ ವಾಹನ ಸಂಚಾರಕ್ಕೆ ಅತಿ ಅಪಾಯಕಾರಿಯಾಗಿತ್ತು. ಈ ಕಾರಣದಿಂದಲೇ ಕೆಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ಸಂಘದ ಸದಸ್ಯರು ಸುಮಾರು ೪ ತಾಸು ಕಾರ್ಯಾಚರಣೆ ನಡೆಸಿ ಸ್ವಚ್ಛತಾ ಕಾರ್ಯ ನಡೆಸಿದರು. ಗುರುಪುರ ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ, ಹಾಲಿ ಸದಸ್ಯ ಜಿ. ಎಂ. ಉದಯ ಭಟ್ ಅವರು ಉಪಸ್ಥಿತರಿದ್ದರು.



