ಕೊಡ್ಮಾಣ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶೌಚಾಲಯ ಉದ್ಘಾಟನೆ
ಬಂಟ್ವಾಳ : ತಾಲೂಕಿನ ಕೊಡ್ಮಾಣ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ ಆರ್ ಪಿ ಎಲ್ ನ ಸಿ.ಎಸ್.ಆರ್ ನಿಧಿಯಡಿ 10 ಲಕ್ಷ ರೂ. ವಿಶೇಷ ಅನುದಾನದಿಂದ ನಿರ್ಮಾಣಗೊಂಡ ನೂತನ ಶೌಚಾಲಯವನ್ನು ಮೇರಮಜಲು ಗ್ರಾ. ಪಂ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ ಅವರು ಉದ್ಘಾಟಿಸಿದರು.

ವೇದಿಕೆಯಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ್ ರಾವ್,ಮೇರಮಜಲು ಗ್ರಾ.ಪಂ ನಿಕಟ ಪೂರ್ವ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿoಜ, ಗ್ರಾ.ಪಂ. ಸದಸ್ಯರಾದ ಹರಿಣಾಕ್ಷಿ ಆರ್ ಬಂಗೇರ, ಭವಾನಿ ಶಂಕರಿ, ಸುಲೋಚನಾ ಕಾಂತಪ್ಪ ಶೆಟ್ಟಿ, ಯಾದವ ಶೆಟ್ಟಿಗಾರ್, ಹರೀಶ್ ಕುಮಾರ್ ಕಲ್ಲಜಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಾಧವಿ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟ್ಟಡ ಗುತ್ತಿಗೆದಾರರಾದ ಸಂತೋಷ್ ಕೊಡ್ಮಾಣ್ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕಿಯರಾದ ಡೋರಿನ್ ಸ್ವಾಗತಿಸಿದರು,ಪ್ರೇಮಾ ವಂದಿಸಿದರು, ರೋಜಾ ಕಾರ್ಯಕ್ರಮ ನಿರೂಪಿಸಿದರು, ಬಳಿಕ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.



