ಬಂಟ್ವಾಳ: ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಎನ್.ಸಿ.ಸಿ ನೌಕಾದಳ ಘಟಕದ ಉದ್ಘಾಟನೆ
ಬಂಟ್ವಾಳ: ಇಲ್ಲಿನ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಎನ್.ಸಿ.ಸಿ ನೌಕಾದಳ ಘಟಕದ ಉದ್ಘಾಟನಾ ಸಮಾರಂಭವು ನಡೆಯಿತು.

ನೌಕದಳ ಘಟಕದ ಎನ್.ಸಿ.ಸಿ ಮಂಗಳೂರು ಇಲ್ಲಿನ ಕಮಾಂಡಿಂಗ್ ಅಧಿಕಾರಿ ಸಿಡಿಆರ್ ಲಿಬಿನ್ ಆರ್ ಜಾನ್‌ಸಾನ್ ಅವರು ನೌಕಾದಳ ಘಟಕದ ಧ್ವಜವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಶೌರ್ಯವನ್ನು ಬೆಳೆಸುವಲ್ಲಿ ನೌಕಾದಳ ಘಟಕದ ಪಾತ್ರ ಮಹತ್ತರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ರವರು ಮಾತನಾಡಿ, ಬಂಟ್ವಾಳ ತಾಲೂಕಿನಲ್ಲಿ ಎನ್.ಸಿ.ಸಿ ಘಟಕ ನಡೆಸಲು ಅವಕಾಶ ಪಡೆದ ಮೊದಲ ಶಾಲೆ ಎಂಬ ಕೀರ್ತಿಯನ್ನು ಈ ಶಾಲೆ ಪಡೆದಿದ್ದು, ಇದಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್‌ರವರು ಶಾಲೆಯಲ್ಲಿ ನೌಕಾದಳ ಘಟಕ ಆರಂಭದ ಮೂಲಕ ವಿದ್ಯಾರ್ಥಿಗಳಿಗೆ ರಾಷ್ಟ್ರ ಸೇವೆಗೆ ಹೊಸ ವೇದಿಕೆ ಸಿಕ್ಕಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಬಿ.ಆರ್.ಎಂ.ಪಿ ಶಾಲೆಯ ಪ್ರಾಂಶುಪಾಲರಾದ ಪೂರ್ಣೇಶ್ವರಿ ಭಟ್ ವೇದಿಕೆಯಲ್ಲಿದ್ದರು. ಕು| ದೃಶ್ಯ ಸ್ವಾಗತಿಸಿದರು.
ಜೋಸಲ್ ಡಿಸೋಜಾ ಕಾರ್ಯಕ್ರಮ
ನಿರೂಪಿಸಿದರು.ಸಿಟಿಒ ರತ್ನಾಕರ್ ವಂದಿಸಿದರು.



