ಬಂಟ್ವಾಳ ಕಾಲೇಜಿನಲ್ಲಿ ಕನ್ನಡ ನಾಡು ನುಡಿ ಕಾರ್ಯಕ್ರಮ
ಬಂಟ್ವಾಳ: ಕನ್ನಡ ಕೇವಲ ಭಾಷೆಯಲ್ಲ ಅಸ್ಮಿತೆ. ಕನ್ನಡ ಭಾಷೆಯನ್ನು ಓದಿದವನು ಕವಿಯೂ ಆಗಬಹುದು. ಕಲಿಯೂ ಆಗಬಹುದು ಎಂದು ಮನೋಹರ ಎಸ್ ದೊಡ್ಡಮನಿ ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಕನ್ನಡ ಸಂಘ ಹಾಗೂ ಐ.ಕ್ಯೂ.ಎ.ಸಿ. ಕೋಶಗಳ ಆಶ್ರಯದಲ್ಲಿ ನಡೆದ ‘ಕನ್ನಡ ನಾಡು-ನುಡಿ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿಯವರು ಮಾತನಾಡಿ, ಮನುಷ್ಯನನ್ನು ಉತ್ತುಂಗ ಸ್ಥಿತಿಗೇರಿಸುವ ಶಕ್ತಿ ಸಾಹಿತ್ಯಕ್ಕಿದೆ. ವಿದ್ಯಾರ್ಥಿಗಳು ಭಾಷಾಭಿಮಾನ ಬೆಳೆಸಿಕೊಳ್ಳುವುದರೊಂದಿಗೆ ಸಾಹಿತ್ಯಾಧ್ಯಯನವನ್ನು ಮಾಡಬೇಕು ಎಂದು ನುಡಿದರು.
ವೇದಿಕೆಯಲ್ಲಿ ಐ.ಕ್ಯು.ಎ.ಸಿ. ಸಂಚಾಲಕರಾದ ಡಾ.ಕಾಶೀನಾಥ ಶಾಸ್ತ್ರೀ ಹೆಚ್.ವಿ. ಉಪಸ್ಥಿತರಿದ್ದರು.
ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಶಿವಣ್ಣಪ್ರಭು ಸ್ವಾಗತಿಸಿ, ಯಕ್ಷಿತಾ ವಂದಿಸಿದರು. ಸ್ಭೂರ್ತಿ ಎಂ. ನಿರೂಪಿಸಿದರು. ವಂದಿತ ಮತ್ತು ಸಂಗಡಿಗರು ಆಶಯಗೀತೆಯನ್ನು ಹಾಡಿದರು.



