ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯ ರಜತ ಸಂಭ್ರಮಾಚರಣೆ
ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮಾಚರಣೆ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ನಡೆಯಿತು.
ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಕೆ.ಎಸ್ .ಕಾರಂತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಸ್ಥಾಪಕಾಧ್ಯಕ್ಷರದಾ ಭಾರತಿ ಶ್ರೀಧರ್ ತುಂಬೆ ಅವರು ವಹಿಸಿದ್ದರು.
ನಿವೃತ್ತ ಅಧ್ಯಾಪಕಿ ಜಯಲಕ್ಷ್ಮಿ ಕಾರಂತ್ ಮಂಗಲ್ಪಾಡಿ ಅವರು ತಮ್ಮ ದಿಕ್ಕೂಚಿ ಭಾಷಣಗೈದು ಕುಟುಂಬದ ಸಾಮರಸ್ಯ ಮತ್ತು ಈಗಿನ ಸಮಾಜದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು.
ಕೂಟ ಮಹಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ.ಸುರೇಶ್ ತುಂಗ ಅವರು “ರಜತದೀವಿಗೆ” ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಇದೇ ವೇಳೆ ವೇದಿಕೆಯ ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ವಿಶೇಷ ಸಾಧಕರಿಗೆ ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ವೇದಿಕೆಯ ಅಧ್ಯಕ್ಷೆ ಉಷಾ ಪ್ರಭಾಕರ್ ಅವರು ತಮ್ಮ ಪ್ರಸ್ತಾವನೆಗೈದರು.
ವೇದಿಕೆಯ ಉಪಾಧ್ಯಕ್ಷೆ ಯಮುನಾ ಐಗಳ್ ಸ್ವಾಗತಿಸಿದರು. ಹೇಮಾ ಆರ್ ಮಯ್ಯ ಮತ್ತು ಸರಸ್ವತಿ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ವಿನಯ್ ಮಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಮಹಿಳಾ ವೇದಿಕೆಯ ಸದಸ್ಯೆಯರಿಂದ ‘ನಾರಿ ಶಕ್ತಿ’ ನಾಟ್ಯ ರೂಪಕ ನಡೆಯಿತು



