Published On: Mon, Oct 27th, 2025

ಶ್ರೀ ಕ್ಷೇ. ಧ. ಗ್ರಾ. ಯೋಜನೆಯ  ಸಾಲೆತ್ತೂರು ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ವಾರ್ಷಿಕೋತ್ಸವ

ಬಂಟ್ವಾಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ ) ವಿಟ್ಲ ಇದರ ಸಾಲೆತ್ತೂರು ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ  ಒಕ್ಕೂಟಗಳಾದ ಸಾಲೆತ್ತೂರು ಎ,  ಸಾಲೆತ್ತೂರು ಬಿ, ಕೊಲ್ನಾಡು ಎ. ಒಕ್ಕೂಟಗಳ ವಾರ್ಷಿಕೋತ್ಸವ ಕಾರ್ಯಕ್ರಮ, ಸಾಲೆತ್ತೂರು ರಾಜೀವ್ ಗಾಂಧಿ ಸೌಹಾರ್ದ ಭವನದಲ್ಲಿ ನಡೆಯಿತು.


ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ದ. ಕ. ಜಿಲ್ಲಾ 2 ರ ನಿರ್ದೇಶಕ ಬಾಬು ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಜನೆಯು ನಡೆದು ಬಂದ ಹಾದಿ,  ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಕೈಗೊಂಡ ಕಾರ್ಯಕ್ರಮಗಳ  ಹಾಗೂ ಒಕ್ಕೂಟ ನಿರ್ವಹಣೆ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯ ಅಧ್ಯಕ್ಷ ದಿನೇಶ್ ಶೆಟ್ಟಿ ವಹಿಸಿದ್ದರು.ಜನಜಾಗೃತಿ ವೇದಿಕೆಯ ಸದಸ್ಯ ರಾಜಾರಾಮ್ ಹೆಗ್ಡೆ ಕುದ್ರಿಯಾ ಅವರು ಅಥಿಥಿಯಾಗಿ ಭಾಗವಹಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಮನೆ ಬಾಗಿಲಿಗೆ ವರ ಪ್ರಸಾದ ರೂಪದಲ್ಲಿ ಬಂದಿದ್ದು, ಇದನ್ನು ನಾವು ಮುಂದಿನ  ತಲೆಮಾರಿಗೆ ನೆನಪಿಸುವ ಕಾರ್ಯವನ್ನು  ಮಾಡಬೇಕಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತಮ ಪ್ರಗತಿ ಬಂದು ಸಂಘ, ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರುಗಳನ್ನು  ಗೌರವಿಸಲಾಯಿತು.


1937ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಲ. ರಾಮ್ ಪ್ರಸಾದ್ ರೈ ತಿರುವಾಜೆ, ಕೇಂದ್ರ ಒಕ್ಕೂಟ ಅಧ್ಯಕ್ಷರಾದ ನವೀನ್ ಚಂದ್ರ ಕಾನಂತ್ತೂರು, ಉಪಾಧ್ಯಕ್ಷ ರಾಜೇಂದ್ರ ರೈ, ಕೊಳ್ನಾಡ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ರಫ್, ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ,ಭಜನಾ ತರಬೇತುದಾರಿ ಕು.ಹರ್ಷಿತಾ ರೈ,ಶೌರ್ಯ ವಿಪತ್ತು ಘಟಕದ ಅಧ್ಯಕ್ಷ ಪುರುಷೋತ್ತಮ ಮಾವೆ. ಸಾಲೆತ್ತೂರು ‘ಎ’ ಒಕ್ಕೂಟದ ಅಧ್ಯಕ್ಷ ಈಶ್ವರ ಪೂಜಾರಿ,ಸಾಲೆತ್ತೂರು ‘ಬಿ’ಒಕ್ಕೂಟದ ಅಧ್ಯಕ್ಷರಾದ ಸುರೇಶ್ ನಾಯ್ಕ್, ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಅರವಿಂದ ರೈ ಉಪಸ್ಥಿತರಿದ್ದರು.
ಸಾಲೆತ್ತೂರು ವಲಯದ ಮೇಲ್ವಿಚಾರಕಿ ಸವಿತಾ  ನಾರಾಯಣ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷರಾದ ಪಿ. ಜಯರಾಮ ಶೇಖ್ ವಂದಿಸಿದರು.ಸಾಲೆತೂರು’ ಎ’ ಒಕ್ಕೂಟದ ಕಾರ್ಯದರ್ಶಿ ರವಿಕುಮಾರ್ ಕೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ  ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter