ಶ್ರೀರಾಮದಲ್ಲಿ “ಉತ್ಕರ್ಷ್ ೨೦೨೫” ಸಮಾರೋಪ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಫೆಸ್ಟ್ ನ “ಉತ್ಕರ್ಷ್ ೨೦೨೫” ಸಮಾರೋಪ ಸಮಾರಂಭ ನಡೆಯಿತು.

ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,
ಈ ಉತ್ಕರ್ಷ ಹೆಸರಿನ ಕಾರ್ಯಕ್ರಮದಿಂದ ಉತ್ತಮ ಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರಕಿ ಅವರ ಬಾಳಿನ ಉತ್ಕರ್ಷಕ್ಕೆ ಕಾರಣವಾಗಲಿ ಎಂದರು.
ಖ್ಯಾತ ಹಾಸ್ಯ ನಟರಾದ ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೋಳಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾಕೇಂದ್ರದ ಕಾರ್ಯಚಟುವಟಿಕೆಗಳನ್ನು ಅಭಿನಂದಿಸಿದರು.ಇದೇ ವೇಳೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನ ಅದ್ವೈತ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆಯಿತು.
ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಸುಜಿತ್ ಕೊಟ್ಟಾರಿ, ಭಾರತ್ ಸರ್ವಿಸಸ್ ನ ಮಾಲಕ ಕಿಶನ್ ಮದೆಪ್ಪಾಡಿ, ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಉಪಪ್ರಾಂಶುಪಾಲೆ ಸುಕನ್ಯಾ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಾದ ಕು. ಅಶ್ವಿನಿ ಸ್ವಾಗತಿಸಿದರು, ಕು. ಯಜ್ಞಶ್ರೀ ವಂದಿಸಿದರು. ಜಯಸೂರ್ಯ ಕಾರ್ಯಕ್ರಮ ನಿರೂಪಿಸಿದರು.



